ಮಂಗಳೂರು, ಸೆ.7 : ನಗರದ ಫಳ್ನೀರ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನಲ್ಲಿ ಆರ್ಟಿಸ್ಟ್ರಿ ಜುವೆಲ್ಲರಿ ಪ್ರದರ್ಶನ ಸೆ.7, ಶನಿವಾರ ಆರಂಭಗೊಂಡಿದ್ದು, ಸೆ.15ರ ತನಕ ನಡೆಯಲಿದೆ.
ಪ್ರಸಕ್ತ ಮತ್ತು ಸಾಂಪ್ರದಾಯಿಕ ಶೈಲಿಯ ಜುವೆಲ್ಲರಿಯನ್ನು ನಟಿ ಸಲೋಮೆ ಡಿಸೋಜ, ಮಿಸ್ ಮಂಗಳೂರು- 2024ರ ವಿಜೇತೆ ಅನನ್ಯಾ ಐತಾಳ್, ಇಂಡಿಯಾನ ಆಸ್ಪತ್ರೆಯ ವೈದ್ಯೆ ಡಾ.ಶಮ್ನಾ ಮಿನಾಝ್ ಅನಾವರಣಗೊಳಿಸಿದರು.
ಸಲೋಮೆ ಡಿಸೋಜ ಮಾತನಾಡಿ ಮಲಬಾರ್ ಗೋಲ್ಡ್ನಲ್ಲಿ ಎಲ್ಲಾ ವಿನ್ಯಾಸದ ಆಭರಣಗಳಿವೆ. ಮಲಬಾರ್ ಗೋಲ್ಡ್ ಮಳಿಗೆಗೆ ಬರುವುದೆಂದರೆ ನಮಗೆ ಖುಷಿ ಎಂದರು.
ಡಾ.ಶಮ್ನಾ ಮಿನಾಝ್ ಮಾತನಾಡಿ ನಮ್ಮ ಕುಟುಂಬದ ಸದಸ್ಯರು ಮಲಬಾರ್ ಗೋಲ್ಡ್ನ ಆರಂಭದ ದಿನಗಳಿಂದಲೇ ಗ್ರಾಹಕರಾಗಿದ್ದಾರೆ. ಇಲ್ಲಿ ನಮ್ಮ ಇಷ್ಟದ ಆಭರಣಗಳು ಲಭ್ಯವಿದೆ ಎಂದರು.
ಅನನ್ಯ ಐತಾಳ್ ಮಾತನಾಡಿ ಮಲಬಾರ್ ಗೋಲ್ಡ್ನಲ್ಲಿ ಆಭರಣಗಳ ಅಪಾರ ಸಂಗ್ರಹವೇ ಇದೆ. ಗ್ರಾಹಕರಿಗೆ ಉತ್ತಮ ಸೇವೆಯೂ ಇಲ್ಲಿ ಲಭ್ಯವಿದೆ ಎಂದರು.
ಈ ಸಂದರ್ಭದಲ್ಲಿ ಸ್ಟೋರ್ ಹೆಡ್ ಶರತ್ಚಂದ್ರನ್, ಅಸಿಸ್ಟೆಂಟ್ ಸ್ಟೋರ್ ಹೆಡ್ ಮುನವ್ವರ್ ಶಾನ್, , ಸೇಲ್ಸ್ ಮ್ಯಾನೇಜರ್ ಗಿರೀಶ್, ಶೋರೂಮ್ ಮ್ಯಾನೇಜರ್ ರಘುರಾಮ್, ಡೆಪ್ಯುಟಿ ಮ್ಯಾನೇಜರ್ ಮುಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೊನಾಲ್ ಸುವರ್ಣ ಉಪಸ್ಥಿತರಿದ್ದರು.