ಉಡುಪಿ,ಅ.12 : ಉಡುಪಿಯ ಕಲ್ಸಂಕದಲ್ಲಿರುವ ಟೈಮ್ಸ್ ಸ್ಕ್ವೇರ್ ಮಾಲ್ನಲ್ಲಿ ’ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಹೋಟೆಲ್ ಅ.9ರಂದು ಉದ್ಘಾಟನೆಗೊಂಡಿತು.
ನೂತನ ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ ಹೋಟೆಲ್ನ್ನು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಜಂಟಿಯಾಗಿ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದ ಪೇಜಾವರ ಸ್ವಾಮೀಜಿ, ಶ್ರೀಕೃಷ್ಣನ ಅನುಗ್ರಹದಿಂದ ನೂತನವಾಗಿ ಆರಂಭಗೊಂಡ ಈ ಹೋಟೆಲ್ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪೇಜಾವರ ಶ್ರೀಪಾದರು ಆಶೀರ್ವಚನ ನೀಡಿ, ಉಡುಪಿಗೆ ಉದ್ಯಮಿ ಜಯರಾಮ್ ಬನಾನ್ ಅವರು ಈ ಹೊಟೇಲ್ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಶ್ರೀ ಕೃಷ್ಣನ ಅನುಗ್ರಹದಿಂದ ಉದ್ಯಮ ಯಶಸ್ವಿಯಾಗುವುದರೊಂದಿಗೆ ಜನತೆಗೂ ಇದರ ಪ್ರಯೋಜನ ದೊರಕಲಿ ಎಂದು ಹಾರೈಸಿದರು.
ಸುಬ್ರಹ್ಮಣ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಉಡುಪಿ ಹೊಟೇಲ್ ಉದ್ಯಮಕ್ಕೆ ಪ್ರಸಿದ್ಧವಾಗಿದೆ. ಜಯರಾಮ್ ಬನಾನ್ ಅವರ ಈ ಹೊಟೇಲ್ ಉದ್ಯಮ ತುಂಬಾ ಜನರಿಗೆ ಉದ್ಯೋಗ ನೀಡಿದ್ದು, ಅವರು ಸಮರ್ಥ ಆಡಳಿತದಿಂದ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಉಡುಪಿ ಧರ್ಮಪ್ರಾಂತದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ದಿ ಓಷಿಯನ್ ಪರ್ಲ್ ಹೋಟೆಲ್ಗೆ ಭೇಟಿ ನೀಡಿ ಶುಭ ಹಾರೈಸಿ ದರು. ಈ ಸಂದರ್ಭ ಶಾಸಕ ಯಶ್ಪಾಲ್ ಸುವರ್ಣ, ಸುನೀಲ್ ಕುಮಾರ್, ಬಿಜೆಪಿ ಮುಖಂಡರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಉಪಾಧ್ಯಕ್ಷರಾದ ಗಿರೀಶ್ ಮತ್ತು ಶಿವಕುಮಾರ್, ಓಶಿಯನ್ ಪರ್ಲ್ ಸಂಸ್ಥೆಯ ಸ್ಥಾಪಕ ಜಯರಾಮ್ ಬನಾನ್, ಜಗದೀಶ್ಅಧಿಕಾರಿ, ಆಡಳಿತ ನಿರ್ದೇಶಕ ರೋಷನ್ ಬನಾನ್, ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಆಚಾರ್ಯ, ಟೈಮ್ಸ್ ಸ್ಕ್ವೇರ್ ಮಾಲ್ನ ಮಾಲಕ ಡಾ.ಜೆರ್ರಿ ವಿನ್ಸಂಟ್ ಡಯಾಸ್, ಮಾಂಡವಿ ಬಿಲ್ಡರ್ಸ್ನ ಗ್ಲೆನ್ ಡಯಾಸ್, ಜೇಸನ್ ಡಯಾಸ್, ಉದ್ಯಮಿಗಳಾದ ಮನೋಹರ್ ಶೆಟ್ಟಿ, ಇಂದ್ರಾಳಿ ಜಯಕರ್ ಶೆಟ್ಟಿ, ಇಬ್ರಾಹಿಂ ಕೋಡಿ, ಮಾಜಿ ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.