ಉರ್ವಸ್ಟೋರ್, ಫೆ 16: ಉರ್ವ ಸ್ಟೋರ್ ಮಹಾಗಣಪತಿ ದೇವಸ್ಥಾನಲ್ಲಿ ಗುರುವಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿತು.
ಬ್ರಹ್ಮಶ್ರೀ ದೇರೆಬೈಲ್ ಡಾ| ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ ದೇಗುಲದ ಪ್ರಧಾನ ಅರ್ಚಕ ವೇ। ಮೂ। ರತ್ನಾಕರ ಭಟ್ ಅವರ ಸಹಯೋಗದಲ್ಲಿ ಬೆಳಗ್ಗೆಯಿಂದಲೇ ವಿವಿಧ ವೈದಿಕ ವಿಧಿ-ವಿಧಾನಗಳು ನಡೆದವು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬೆಳಗ್ಗೆ 9.05ಕ್ಕೆ ಶ್ರೀ ದುರ್ಗಾದೇವಿಗೆ ಬ್ರಹ್ಮಕಲಶಾಭಿಷೇಕ, ನ್ಯಾಸ ಪೂಜೆ, ಮಹಾಪೂಜೆ, ಅವಸ್ರುತ ಬಲಿ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 4ರಿಂದ ದಿಕ್ಷಾಲ ಹೋಮಗಳು , ನೂತನ ಬಲಿಪೀಠಗಳ ಪ್ರತಿಷ್ಠೆ ಬ್ರಹ್ಮರಥಕ್ಕೆ ದಿಕ್ಷಾಲ ಹೋಮಗಳು, 101 ಕಲಶಾಭಿಷೇಕ, ಅಧಿವಾಸ ಹೋಮ, ಬ್ರಹ್ಮರಥಾಧಿವಾಸ, ಬಯನ ಬಲಿ ಹೊರಟು ಉತ್ಸವ, ಉರಗ ಬಂಧದ ಅಶ್ವತ್ಥಕಟ್ಟೆಯಲ್ಲಿ ನಾಗ ಸನ್ನಿಧಾನದಲ್ಲಿ ಕಟ್ಟೆ ಪೂಜೆ, ವಸಂತಕಟ್ಟೆ ಪೂಜೆ, ರಾತ್ರಿ ಪೂಜೆ, ಶ್ರೀ ಭೂತಬಲಿ ಜರಗಿತು.