ಬೆಂಗಳೂರು,ಸೆ.12: ‘ಮಿನ್ನಲ್ ಮುರಳಿ’ ಮತ್ತು ‘2018 – ಎವ್ರಿಒನ್ ಈಸ್ ಎ ಹೀರೋ’ ಚಿತ್ರಗಳಲ್ಲಿ ನಟಿಸಿರುವ
ನಟ ಟೊವಿನೋ ಥಾಮಸ್ ಅವರ ಎ ಆರ್ ಎಂ 50ನೇ ಚಿತ್ರ. ಟೊವಿನೋ ಥಾಮಸ್ ಅವರು ಎ ಆರ್ ಎಂ (ಅಜಯಂತೇ ರಂದಮ್ ಮೋಷನಂ) ಎಂಬ ಚಿತ್ರದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ.
ಜಿತಿನ್ ಲಾಲ್ ನಿರ್ದೇಶನದ ಚೊಚ್ಚಲ ಚಿತ್ರ. ಸಿನಿಮಾ ಸಂಪೂರ್ಣವಾಗಿ 3ಡಿಯಲ್ಲಿ ತಯಾರಾಗಿದೆ. ಗುಣಮಟ್ಟದ ತಾಂತ್ರಿಕತೆ ಹೊಂದಿದೆ. ಚಿತ್ರದಲ್ಲಿ ಮಹಿಳೆಯೋರ್ವರು ಕಥೆಯನ್ನು ವಿವರಿಸುತ್ತಾರೆ. ಎ ಆರ್ ಎಂ ಆ್ಯಕ್ಷನ್ ಸಿನಿಮಾವಾಗಿದೆ.
ಟೊವಿನೋ ಥಾಮಸ್ ಮೂರು ವಿಭಿನ್ನ ಪಾತ್ರಗಳನ್ನುನಿರ್ವಹಿಸಿದ್ದಾರೆ. ಮಣಿಯನ್, ಕುಂಜಿಕ್ಕೆಲು ಮತ್ತು ಅಜಯನ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಮಿಯ ಸಂಪತ್ತನ್ನು ರಕ್ಷಿಸುವ ವಿಷಯವನ್ನು ಬಿಂಬಿಸುವ ಚಿತ್ರವಾಗಿದೆ. ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುತ್ತದ.ಎ ಆರ್ ಎಂ ಟೊವಿನೋ ಥಾಮಸ್ ಅವರ 50ನೇ ಚಿತ್ರವಾಗಿದೆ.ಆ್ಯಕ್ಷನ್ ಸೀಕ್ವೆನ್ಸ್ ನಿರ್ವಹಿಸಲು ನಟ ಕಳರಿಪಯಟ್ಟುವಿನ ವ್ಯಾಪಕ ತರಬೇತಿ ಪಡೆದಿದ್ದರು. ಕಾಂತಾರ ಖ್ಯಾತಿಯ ವಿಕ್ರಮ್ ಮೂರ್ ಮತ್ತು ಫೀನಿಕ್ಸ್ ಪ್ರಭು ಸ್ಟಂಟ್ಸ್ ಸಂಯೋಜಿಸಿದ್ದಾರೆ.