ಮಂಗಳೂರು, ಸೆ.14 : ಫೀನಿಕ್ಸ್ ಫಿಲ್ಮ್ಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ ಮಹೇಂದ್ರ ಕುಮಾರ್ ನಿರ್ಮಾಣದ ಹಾಗೂ ಗೌರಿ ಶ್ರೀನಿವಾಸರವರ ನಿರ್ದೇಶನದ ದಿ ಜರ್ನಿ ಆಫ್ ಬೆಳ್ಳಿ ಚಲನಚಿತ್ರ ಶುಕ್ರವಾರ ಭಾರತ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ನಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಅವರು, ಕಳೆದ ಹಲವಾರು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಅಭಿರುಚಿಯ ಸಿನಿಮಾಗಳು ಬರುತ್ತಿವೆ. ಅವುಗಳ ಮೂಲ ನಮ್ಮ ಕರಾವಳಿ ಆಗಿರುವುದು ಖುಷಿಯ ವಿಚಾರ. ಸೈನಿಕ ಮತ್ತು ಮಗಳ ಭಾಂದವ್ಯದ ಮೇಲಿನ ಕಥೆ ಈ ಚಿತ್ರದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತಾಡಿದ ಅವರು, ಇಡೀ ಚಿತ್ರತಂಡಕ್ಕೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಕುಟುಂಬ ಸಮೇತರಾಗಿ ಕೂತು ನೋಡುವಂತಹ ಸಿನಿಮಾ ಇದಾಗಿದೆ ಎಂದರು.
ಬಳಿಕ ಮಾತಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ನಾನು ಕಾರ್ಯಕ್ರಮಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಸರಕಾರಗಳು ಎಲ್ಲಾ ಸಿನಿಮಾಗಳಿಗೆ ಹೆಚ್ಚಿನ ಸಬ್ಸಿಡಿ ನೀಡುವ ಮೂಲಕ ಬೆಂಬಲಿಸಲಿ ಎಂದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತಾಡಿ, ಮಹೇಂದ್ರ ಕುಮಾರ್ ಕಾಲೇಜು ಜೀವನದಲ್ಲೇ ಕಲೆ, ಸಾಹಿತ್ಯ ಅಭಿರುಚಿ ಹೊಂದಿದವರು. ಅವರ ಮೂಲಕ ಇನ್ನಷ್ಟು ಸಿನಿಮಾಗಳು ಬರಲಿ ಎಂದರು.ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ದಿ ಜರ್ನಿ ಆಫ್ ಬೆಳ್ಳಿ ಸಿನಿಮಾದ ನಿರ್ಮಾಪಕರು ಮಹೇಂದ್ರ ಕುಮಾರ್ ಈ ಹಿಂದೆ ಕಾರ್ನಿಕೊದ ಕಲ್ಲುರ್ಟಿ’ಎಂಬ ತುಳು ಸಿನೆಮಾ ನಿರ್ಮಾಣ ಮಾಡಿದ್ದಾರೆ. ಇದು ಅವರ ಎರಡನೇ ಚಿತ್ರವಾಗಿದೆ.