ಮಂಗಳೂರು, ,ಅ.06 :ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ ಅಕ್ಟೋಬರ್ 14 ರವರೆಗೆ ನಡೆಯಲಿರುವ ಅದ್ಧೂರಿ ದಸರಾ ಮಹೋತ್ಸವವನ್ನು ಅಕ್ಟೋಬರ್ 3 ಗುರುವಾರದಂದು ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಉದ್ಘಾಟಿಸಿದರು.
ದೇವಾಲಯದಲ್ಲಿ ನವದುರ್ಗೆ ಮತ್ತು ಶಾರದಾ ದೇವಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು, ಶಾರದ ದೇವಿಯ ವಿಗ್ರಹವನ್ನು ದೇವಾಲಯದ ಆವರಣದಲ್ಲಿ ಸರಳ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಪ್ರತಿಷ್ಠಾಪನೆಗೂ ಮುನ್ನ ಹುಲಿ ಕುಣಿತ ನಡೆಯಿತು.
ಒಂಬತ್ತು ದಿನಗಳ ಕಾಲ ನಡೆಯುವ ದಸರಾ ಮಹೋತ್ಸವದಲ್ಲಿ ದೇವರಿಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 13 ರಂದು ಸಂಜೆ 4 ಗಂಟೆಗೆ ದಸರಾ ಮಹೋತ್ಸವದ ಭವ್ಯ ಮೆರವಣಿಗೆ ಆರಂಭವಾಗಲಿದೆ.