ಸುಳ್ಯ, ಮಾ. 15 : ರಬ್ಬರ್ ಸ್ಮೋಕ್ ಹೌಸ್ ವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ರಬ್ಬರ್ ಸೀಟ್ ಬೆಂಕಿಗೆ ಆಹುತಿಯಾಗಿ ಅಪಾರ ನಷ್ಟ ಸಂಭವಿಸಿರುವ ಘಟನೆ ಸುಳ್ಯ ಅರಂತೋಡು ಗ್ರಾಮದ ಪಿಂಡಿಮನೆ ಎಂಬಲ್ಲಿ ಬುಧವಾರ ನಡೆದಿದೆ.
ರೇಣುಕಾಪ್ರಸಾದ್ ಎಂಬವರ ರಬ್ಬರ್ ಸ್ಮೋಕ್ ಹೌಸ್ ವೊಂದಕ್ಕೆ ಮಧ್ಯರಾತ್ರಿ ಬೆಂಕಿ ತಗುಲಿದೆ. ಮನೆಯವರೆಲ್ಲಾ ಸೇರಿ ಬ್ಯಾರೆಲ್ ನಲ್ಲಿದ್ದ ನೀರನ್ನು ಬಕೆಟ್ ಮೂಲಕ ಸ್ಮೋಕ್ ಹೌಸ್ ಮೇಲೆ ಹಾಯಿಸಿದ್ದಾರೆ. ಇದರಿಂದ ಕೊಟ್ಟಿಗೆಗೆ ಬೆಂಕಿ ಹತ್ತಿಕೊಳ್ಳುವುದು ತಪ್ಪಿದೆ ಎನ್ನಲಾಗಿದೆ.
ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಸುಮಾರು 180 ಕೆಜಿಯಷ್ಟು ರಬ್ಬರ್ ಶೀಟ್ ಗಳು ಬೆಂಕಿಗೆ ಆಹುತಿಯಾಗಿರುವುದಾಗಿ ಅಂದಾಜಿಸಲಾಗಿದೆ.