ಮಂಗಳೂರು: ಜ.30 :”ಮೀರಾ“ ತುಳು ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮವು ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಜರುಗಿತು. ಕಾರ್ಯಕ್ರಮವನ್ನು ಸಿನಿಮಾ ನಿರ್ಮಾಪಕ ಲಂಚುಲಾಲ್ ಕೆ.ಎಸ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ”ಮೀರಾ“ತುಳು ಸಿನಿಮಾದಲ್ಲಿ ಹೆಣ್ಣಿನ ಬದುಕಿನ ಕುರಿತಾದ ಕಥೆಯಿದೆ.ಫೆ.21ಕ್ಕೆ ನಮ್ಮ ಸಿನಿಮಾ ಬಿಡುಗಡೆಯಾಗಲಿದೆ. ಎಲ್ಲರೂ ಸಿನಿಮಾ ನೋಡಿ ನಮ್ಮನ್ನು ಬೆಂಬಲಿಸಿ ಎಂದು ಹೇಳಿದರು.
ಬಾಲನಟಿ ಲಕ್ಷ್ಯ ಮಾತಾಡಿ, ನನಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿಯಿತ್ತು. ಈ ಸಿನಿಮಾ ನನಗೆ ಅವಕಾಶ ನೀಡಿತು. ನನಗೆ ತುಂಬಾ ಖುಷಿಯಾಗುತ್ತಿದೆ ಎಂದರು.ನಟಿ ಇಶಿತಾ ಶೆಟ್ಟಿ ಮಾತಾಡಿ, ನಾನು ಕಾಸರಗೋಡು ಮೂಲದವಳು. ನನಗೆ ಈ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ನಟ ಮಂಜು ರೈ ಮೂಳೂರು ಅವರು ಮಾತಾಡಿ, ತುಳು ಚಿತ್ರವನ್ನು ನೋಡಲು ಸಿನಿಮಾ ಮಂದಿರಕ್ಕೆ ಜನರು ಬರುವುದಿಲ್ಲ. ಈ ವೇಳೆಯಲ್ಲಿ ಲಂಚುಲಾಲ್ ದೊಡ್ಡ ಮನಸ್ಸು ಮಾಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡವನ್ನು ಬೆಂಬಲಿಸಿ ಎಂದರು.
ಈ ಸಂದರ್ಭದಲ್ಲಿ ಬೀದಿನಾಯಿಗಳ ಆರೈಕೆಯಲ್ಲಿ ತೊಡಗಿರುವ ರಜನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸೌಜನ್ಯ ಹೆಗ್ಡೆ ನಿರೂಪಿಸಿದರು.