ಮಂಗಳೂರು, ಫೆ.12 : ಆಕಾಶ್ ಎಜುಕೇಷನ್ ಸರ್ವಿಸ್ ಲಿಮಿಟೆಡ್‌ನಲ್ಲಿ ತರಬೇತಿ ಪಡೆದ ನಾಲ್ವರು ವಿದ್ಯಾರ್ಥಿಗಳು 2025ರ ಜೆಇಇ ಮೇನ್ಸ್ (ಸೆಷನ್ 1) ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳ ಪೈಕಿ ಅನಿಕೇತಿ ಡಿ.ಶೆಟ್ಟಿ ಮತ್ತು ವಿಟ್ಟಲ್ ದಾಸ್ ಎ. ಇಬ್ಬರೂ 99.90 ಪರ್ಸೆಂಟೈಲ್ ಗಳಿಸಿದರೆ, ರೇಮಂಡ್ ಎಲಿಜಾ ಪಿಂಟೊ 99.62 ಪರ್ಸೆಂಟ್ ಮತ್ತು ಆಯುಷಿ ನಾಯಕ್ 99.34 ಪರ್ಸೆಂಟ್ ಗಳಿಸಿದ್ದಾರೆ.
ವಿದ್ಯಾರ್ಥಿಗಳು ಶೇಕಡ 99ಕ್ಕಿಂತ ಹೆಚ್ಚು ಅಂಕ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಫಲಿತಾಂಶಗಳು ವಿದ್ಯಾರ್ಥಿಗಳ ಶೈಕ್ಷಣಿಕ ಉತ್ಕೃಷ್ಟತೆಯನ್ನು ಪ್ರತಿಬಿಂಬಿಸುತ್ತವೆ. ಸವಾಲಿನ ಪರೀಕ್ಷೆಯಲ್ಲಿ ದೊರೆತ ಯಶಸ್ಸು ಇದಾಗಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಿನ್ನೆ ಈ ಫಲಿತಾಂಶಗಳನ್ನು ಪ್ರಕಟಿಸಿದೆ ಎಂದು ಆಕಾಶ್ ಎಜುಕೇಶನ್ ಸರ್ವಿಸಸ್ ಲಿಮಿಟೆಡ್ನ ಮುಖ್ಯ ಅಕಾಡೆಮಿ ಮತ್ತು ಬ್ಯುಸಿನೆಸ್ ಆಫೀಸರ್ ಶ್ರೀಧೀರ್ ಕುಮಾರ್ ಮಿಶ್ರಾ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು , ನಮ್ಮ ವಿದ್ಯಾರ್ಥಿಗಳು ಜೆಇಇ ಮೇನ್ಸ್ 2025 ಪರೀಕ್ಷೆಯಲ್ಲಿ ಸಾಧಿಸಿದ ಅತ್ಯುತ್ತಮ ಫಲಿತಾಂಶಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಕಠಿಣ ಪರಿಶ್ರಮ, ನಿರ್ಣಯ ಈ ಫಲಿತಾಂಶ ಪಡೆಯಲು ಸಾಧ್ಯವಾಗಿಸಿತು. ಆಕಾಶ್ ಎಜುಕೇಶನಿನ ವಿದ್ಯಾರ್ಥಿ ಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಎಲ್ಲಾ ಯಶಸ್ವಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ನಾವು ಶುಭ ಹಾರೈಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಸಹಾಯಕ ನಿರ್ದೇಶಕ ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.