ಬೋಳೂರು, ಏ.06: ಬಾಲಾಂಜನೇಯ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವ, ಅಮೃತ ಮಹೋತ್ಸವ ಪ್ರಯುಕ್ತ ಶುಕ್ರವಾರ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ವೈದಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬೆಳಗ್ಗೆ ಗಣಪತಿ ಹೋಮ ಸಂಪನ್ನ ಗೊಂಡಿತು. ಬಳಿಕ ತೋರಣ ಮುಹೂರ್ತ, ಪ್ರಾಯಶ್ಚಿತ್ತ ಹೋಮಗಳು, ನವಗಹ ಶಾಂತಿ ಹೋಮ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ರಾಮಭದ್ರಕ ಮಂಡಲ ಪೂಜೆ ನಡೆಯಿತು.
ಎ. 5ರಂದು ಬೆಳಗ್ಗೆ ಶಾಂತಿ ಹೋಮಗಳು, ಬಿಂಬ ಶುದ್ದಿ ಪ್ರಕ್ರಿಯೆಗಳು ವಾಯುಸ್ತುತಿ ಪುರಶ್ಚರಣ ಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಬಿಂಬಾಧಿವಾಸ ಪ್ರಕ್ರಿಯೆಗಳು, ಅಧಿವಾಸ ಹೋಮ , ತತ್ವಹೋಮ, ಅಷ್ಟೋತ್ತರ ಗಳ ಶತಕಲಶಪೂರಣ, ಕಲಶಾಧಿವಾಸ ಕಾರ್ಯಕ್ರಮ ನಡೆಯಿತು.
ಸಂಜೆ ಸಾಮೂಹಿಕ ಹನುಮಾನ್ ಚಾಲೀಸ ಪಠನ, ಭಕ್ತಿ ಭಾವ ಸಂಗಮ – ವೀಡಿಯೋ ಗೀತೆ ಗಳ ಸಂಭ್ರಮ, ಸನಾತನ ನಾಟ್ಯಾಲಯದಿಂದ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು.