ಮಂಗಳೂರು, ಎ. 15 : ಮಂಗಳೂರು ಕರಾವಳಿ ಅಲ್ಪಸಂಖ್ಯಾಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ಇದರ ನೂತನ ಕಟ್ಟಡ ‘ಬಹರ್-ಎ-ನೂರ್’ ಶನಿವಾರ ಉತ್ತರ ದಕ್ಕೆ ಬಂದರ್ ನಲ್ಲಿ ಲೋಕಾರ್ಪಣೆಗೊಂಡಿತು.
ನೂತನ ಕಟ್ಟಡದಲ್ಲಿ ಮಂಜುಗಡ್ಡೆ ಸ್ಥಾವರವನ್ನು ಬಂದರು, ಮೀನುಗಾರಿಕೆ ಮತ್ತು ಒಳನಾಡಿ ಜಲಸಾರಿಗೆ ಇಲಾಖೆ ಸಚಿವ ಮಂಕಾಳು ಎಸ್. ವೈದ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿ, ಲಾಭದಾಯಕವಾಗಿ ನಡೆಯುತ್ತಿರುವ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾ.ಸ. ಸಂಘವು ಎರಡು ದಶಕಗಳಿಂದ ನಿರಂತರ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಇದನ್ನು ಮುಂದುವರೆಸಬೇಕಾಗಿದೆ. ಈ ಸಂಸ್ಥೆ ಇನ್ನಷ್ಟು ಪ್ರಗತಿ ಹೊಂದಲಿ ಎಂದು ಹಾರೈಸಿದರು.
ಬಹರ್ -ಎ-ನೂರ್ ನೂತನ ಕಟ್ಟಡ ಉದ್ಘಾಟಿಸಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಈ ಸಂಸ್ಥೆ 23 ವರ್ಷಗಳಿಂದ ಹಂತ ಹಂತವಾಗಿ ಬೆಳೆದು ಬಂದಿದ್ದು,ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆ ತೆರೆಯುವಂತಾಗಲಿ ಎಂದರು .
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಜೆ. ಮುಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್,ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕೆ., ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ ಪ್ರೇಮಾನಂದ ಶೆಟ್ಟಿ, ಪ್ರಮುಖರಾದ ಅಬ್ದುಲ್ ರವೂಫ್, ಸಂಶುದ್ದೀನ್, ಸಿಎ ಪ್ರವೀಣ್ ಕುಮಾರ್ ಶೆಟ್ಟಿ ಚೇತನ್ ಬೆಂಗ್ರೆ, ಉದಯಾನಂದ ಎ., ಅನಿಲ್ ಕುಮಾರ್, ಕೆ.ಎಲ್. ಇಸ್ಮಾಯಿಲ್ ಎಸ್.ಎಂ.ಇಬ್ರಾಹೀಂ, ಅಹಮ್ಮದ್, ಅಶ್ರಫ್, ಅಬ್ದುಲ್ ರಹಿಮಾನ್, ಬಿ. ಅಹಮ್ಮದ್ ಬಾವ, ಸಂಘದ ನಿರ್ದೇಶಕರು ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ ಲತೀಫ್ ಸ್ವಾಗತಿಸಿದರು. ಸಲಹೆಗಾರ ಮಲಾರ್ ಮುಹಮ್ಮದ್ ಮುಸ್ತಾಫಾ ಪ್ರಸ್ತಾವಿಸಿದರು. ತ್ಯಾಗಂ ಹರೇಕಳ ವಂದಿಸಿದರು.