ಮಂಗಳೂರು, ಮೇ.1 : ನಿಧಿಲ್ಯಾಂಡ್ ಇನ್ ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ನೂತನ ಏಷಾರಾಮಿ ವಸತಿ ಸಮುಚ್ಚಯ ಯೋಜನೆ ‘ಸ್ಕೈ ಗಾರ್ಡನ್’ಗೆ ಭೂಮಿ ಪೂಜೆ ಬುಧವಾರ ನೆರವೇರಿತು.
ಈ ಸಂದರ್ಭದಲ್ಲಿ ಭೂಮಿ ಪೂಜೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಪುರೋ ಹಿತ ಕೃಷ್ಣ ಭಟ್, ಲೇಡಿಹಿಲ್ ಚಚ್ ೯ನ ಧರ್ಮಗುರು ವಂ| ಲಾನ್ಸನ್ ಪಿಂಟೊ ಅವರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನಡೆಯಿತು. ವಸತಿ ಸಮುಚ್ಚಯದ ಬ್ರೋಷರ್ ಅನ್ನು ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರಶಾಂತ್ ಕೆ. ಸನಿಲ್ ಬಿಡುಗಡೆಗೊಳಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ಮಂಗಳೂರು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮುಖ್ಯಸ್ಥೆ ಬಿ.ಕೆ.ವಿಶ್ವೇಶ್ವರಿ, ಉದ್ಯಮಿ ಡಿ.ಬಿ.ಮೆಹ್ರ ಆರ್ಕಿಟೆಕ್ಟ್ ಧರ್ಮರಾಜ್, ಭೂಮಾಲಕರಾದ ಎಫ್.ಸಿ.ಪಿಂಟೊ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ ಮಾಲಕ ಪ್ರಶಾಂತ್ ಸನಿಲ್, ಮತ್ತಿತರರು ಶಿಲಾನ್ಯಾಸ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮಾಲಕರ ಸೋದರಿ ರೇವತಿ ಸನಿಲ್ ಹಾಗೂ ಪತ್ನಿ ನೈನಾ ಸನಿಲ್ ಭಾಗವಹಿಸಿದ್ದರು.