ಮಂಗಳೂರು, ಆ. 08 : ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿರುವ ಕೆನರಾ ಎಂಜಿನಿಯರಿಂಗ್ ಕಾಲೇಜಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸ್ವಾಯತ್ತ ಸಂಸ್ಥೆಯ ಮಾನ್ಯತೆ ನೀಡಿದೆ. ಈ ಮೂಲಕ ಕಾಲೇಜು ತನ್ನದೇ ತಾಂತ್ರಿಕ ಪಠ್ಯ ವಸ್ತು, ಪರೀಕ್ಷೆ, ಫಲಿತಾಂಶ ನೀಡಲು ಸಾಧ್ಯವಾಗಲಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನರಾ ಎಂಜಿನಿಯರಿಂಗ್ ಕಾಲೇಜು ರಜತ ಮಹೋತ್ಸವ ಸಂಭ್ರಮದ ಸಿದ್ಧತೆಯಲ್ಲಿರುವಾಗ ಈ ಸ್ಥಾನಮಾನ ಲಭಿಸಿರುವುದು ಹರ್ಷ ತಂದಿದೆ. ಶೈಕ್ಷಣಿಕ ಅನ್ವೇಷಣೆ, ಸರಳೀಕೃತ ದಕ್ಷತೆಯ ಹೊಸ ಅಧ್ಯಾಯ ಆರಂಭವಾಗಲಿದೆ. ಶೈಕ್ಷಣಿಕ ಅನ್ವೇಷಣೆ, ಸರಳೀಕೃತ ದಕ್ಷತೆಯ ಹೊಸ ಅಧ್ಯಾಯ ಆರಂಭವಾಗಲಿದೆ. ಕಾಲೇಜಿನ ಸ್ವಾಯತ್ತ ಸ್ಥಾನಮಾನದಿಂದಾಗಿ ಇದೀಗ ವಿದ್ಯಾರ್ಥಿಗಳ ಪಠ್ಯದಲ್ಲಿ ಅನ್ವೇಷಣಾ ವಿಷಯಗಳು, ಕೈಗಾರಿಕಾ ಸ್ನೇಹಿ ಕೌಶಲಗಳು, ಉನ್ನತ ಶೈಕ್ಷಣಿಕ ಆಡಳಿತ ಸಾಧ್ಯವಾಗಲಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯ ಪರಂಪರೆ ಮತ್ತು ಮೂಲ ಆಶಯವನ್ನು ಇನ್ನಷ್ಟು ಬಲಗೊಳಿಸಿದಂತಾಗಿದೆ ಎಂದರು.
ಪ್ರಸ್ತುತ ಕೆನರಾ ಎಂಜಿನಿಯರಿಂಗ್ ಕಾಲೇಜು ಏಳು ಯುಜಿ ಎಂಜಿನಿಯರಿಂಗ್ ಕೋರ್ಸುಗಳನ್ನು ನೀಡುತ್ತಿದೆ. ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮೆಶಿನ್ ಲರ್ನಿಂಗ್, ಇನ್ಫಾರ್ಮೆಶನ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಅಂಡ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಡಿಸೈನ್, ಕಂಪ್ಯೂಟರ್ ಸೈನ್ಸ್ ಅಂಡ್ ಬ್ಯುಸಿನೆಸ್ ಸಿಸ್ಟಮ್, ಮೆಕ್ಯಾನಿಕಲ್ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೋರ್ಸ್ಗಳಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆನರಾಹೈ ಸ್ಕೂಲ್ ಅಸೋಸಿಯೇಶನ್ ಜಂಟಿಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಉಪಾಧ್ಯಕ್ಷ ಕೆ, ಸುರೇಶ್ ಕಾಮತ್, ಕೋಶಾಧಿಕಾರಿ ಎಂ. ಜಗನ್ನಾಥ ಕಾಮತ್, ಕೆನರಾ ವಿಕಾಸ್ ಸಮೂಹ ಸಂಸ್ಥೆಗಳ ಸಂಯೋಜಕ ಬಸ್ತಿ ಪುರುಷೋತ್ತಮ ಶೆಣೈ ಪ್ರಮುಖರಾದ ಡಿ. ವಿಕ್ರಮ್ ಪೈ ರಾಘವೇಂದ್ರ ಕುಡ ಎಂ. ನರೇಶ್ ಶೆಣೈ, ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ| ನಾಗೇಶ್ ಎಚ್.ಆರ್. ಉಪಸ್ಥಿತರಿದ್ದರು.