ಉಡುಪಿ, ಆ. 22 : ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ದೋಣಿ ಮಗುಚಿ ಬಿದ್ದು, ಮೀನುಗಾರನೊರ್ವ ಮೃತಪಟ್ಟ, ಘಟನೆ ಸಾಸ್ತಾನದ ಕೋಡಿತಲೆ ಬಳಿ ಆಗಸ್ಟ್ 22 ,ಶುಕ್ರವಾರ ಸಂಭವಿಸಿದೆ.
ಮೃತರನ್ನು ಶರತ್ ಖಾರ್ವಿ (27) ಎಂದು ಗುರುತಿಸಲಾಗಿದೆ.
ಮೂವರು ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಬಲವಾದ ಅಲೆಗಳಿಂದಾಗಿ ಅವರ ದೋಣಿ ಮಗುಚಿ ಬಿದ್ದಿದ್ದು, ಶರತ್ ಖಾರ್ವಿ ಮೀನುಗಾರ ಮೃತಪಟ್ಟಿದ್ದಾರೆ.ಇಬ್ಬರು ಮೀನುಗಾರರಾದ ಅಕ್ಷಯ್ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಸುರಕ್ಷಿತವಾಗಿ ಈಜಿ ದಡ ಸೇರಿ,ದ್ದಾರೆ.
ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.