ಸುಳ್ಯ, ಮಾ. 12 : ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರೊಬ್ಬರು ಗುರುವಾರ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಬೇರ್ಯ ನಿವಾಸಿ ಮಂಜು ಪಿ (42) ಎಂದು ಗುರುತಿಸಲಾಗಿದೆ.
ಮಂಜು ಅವರು ಕಾಲೇಜಿನಲ್ಲಿ ಮಧ್ಯಾಹ್ನ ತನಕ ತರಗತಿ ನಡೆಸಿ ಬಳಿಕ ತಲೆನೋವು ಎಂದು ವಿದ್ಯಾರ್ಥಿಗಳಲ್ಲಿ ಹೇಳಿದ್ದು, ಆ ಬಳಿಕ ಸ್ಥಳೀಯ ಖಾಸಗಿ ಮೆಡಿಕಲ್ ಗೆ ತೆರಳಿ ಔಷಧ ಖರೀದಿಸಲು ಹೋದಾಗ ಅಲ್ಲೆ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.











