ಮಂಗಳೂರು.ಮಾ. 19 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55 ನೇ ವಾರ್ಡಿನ ರಸ್ತೆ ಅಗಲೀಕರಣ ಸಹಿತ ತಡೆಗೋಡೆ ನಿರ್ಮಾಣ ಕಾಮಗಾರಿಯು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಅದರ ಭೂಮಿ ಪೂಜೆಯು ಇತ್ತೀಚಿಗೆ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶೈಲೇಶ್ ಬಿ ಶೆಟ್ಟಿ , ಹಿರಿಯ ಕಾರ್ಯಕರ್ತರಾದ ಪುಂಡಲೀಕ ಸುವರ್ಣ, ದೇವದಾಸ್ ಶೆಟ್ಟಿ, ಚಂದ್ರಹಾಸ್ ಕೊಟ್ಟಾರಿ, ವಾರ್ಡ್ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ಬೂತ್ ಅಧ್ಯಕ್ಷರುಗಳಾದ ಗಣೇಶ್ ಕೊಟ್ಟಾರಿ, ಪ್ರಮೋದ್ ಕೊಟ್ಟಾರಿ, ದಿನೇಶ್ ಕುಲಾಲ್, ಸೋಮಶೇಖರ್, ಗಣೇಶ್, ಕಾರ್ಯದರ್ಶಿ ಲೋಕೇಶ್, ನಾರಾಯಣ ಕುಂದರ್, ಪ್ರಮುಖರಾದ ಪ್ರವೀಣ್ ನಿಡ್ಡೆಲ್, ಲಲಿತಾ, ಪ್ರೀತಾ ಕಾಮತ್, ತರುಣ್, ಪೂಜಾ, ಪ್ರೇಮಲತಾ ನಾಯ್ಕ, ಲೋಲಾಕ್ಷಿ, ನಟೇಶ್, ಸೀತಾರಾಮ್ ಶೆಟ್ಟಿ, ಯೋಗೀಶ್, ಮುರಳೀಧರ, ಪುರುಷೋತ್ತಮ್, ಪ್ರಿಯತ್, ನಳಿನಿ, ಪೂರ್ವಿ, ಶರತ್, ಶಶಿಕಲಾ, ಕುಶಾಲ, ಚೈತ್ರ, ನಮ್ರತ, ಮೀರಾ, ಜೀವಿತ್, ಸಂಭ್ರಮ್ ಮೊದಲಾದವರು ಉಪಸ್ಥಿತರಿದ್ದರು.











