ಮಂಗಳೂರು,ಮೇ.30 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 37ನೇ ಮರೋಳಿ ವಾರ್ಡಿನ ಪಿ.ಎಲ್. ಕ್ಯಾಟರ್ಸ್ ಲೇನ್ ಮರೋಳಿ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿಯು 20ಲಕ್ಷ ರೂ. ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು.
ನಂತರ ಮಾತನಾಡಿದ ಶಾಸಕರು, ಮಳೆಗಾಲದಲ್ಲಿ ಈ ಪ್ರದೇಶಕ್ಕೆ ತೊಂದರೆ ಉಂಟಾಗುತ್ತಿದ್ದ ಬಗ್ಗೆ ಸ್ಥಳೀಯರು ಮಾಡಿದ ಮನವಿಯಂತೆ ಲಭ್ಯ ಅನುದಾನಗಳನ್ನು ಬಳಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಿರಣ್ ಮರೋಳಿ, ಮನೋಹರ್ ಶೆಟ್ಟಿ ಕದ್ರಿ, ರುಕ್ಮಯ್ಯ, ರಾಘು, ಅರುಣ್ ಶೆಟ್ಟಿ, ರಾಜೇಶ್ ಅಲಂಗಾರ್, ಮಾಲತಿ, ಶರತ್, ಸುಲೋಚನಾ, ವತ್ಸಲಾ, ವಾಲ್ಟರ್ ಪಿಂಟೋ, ಶೇಖರ್ ಪೂಜಾರಿ, ಸ್ಟೆಲ್ಲಾ ಲೋಬೋ, ಸ್ಟೀವನ್ ಲೋಬೋ, ಜಗದೀಶ್ ಸಾಲ್ದಾನ, ರೇಷ್ಮಾ ಪಿಂಟೋ, ಬೆನೆಡಿಕ್ಟ್ ಮಸ್ಕರೆನ್, ವಾರ್ಡಿನ ಪ್ರಮುಖರು, ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು











