ಉಡುಪಿ, ಮೇ. 31 : ವ್ಯಕ್ತಿಯೊಬ್ಬರು ತನ್ನ ತೋಟದಲ್ಲಿರುವ ಬಾವಿಯ ಕೆಸರು ತೆಗೆಯಲು ಹೋಗಿ ಕೈಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ನಡೆದಿದೆ.
ಮೃತರನ್ನು ಬೆಳ್ವೆ ಗ್ರಾಮದ ಪದ್ದು ಕುಂಬಾರ(75) ಎಂದು ಗುರುತಿಸ ಲಾಗಿದೆ.
ಪದ್ದು ಕುಂಬಾರ ಇವರು ಮೇ 27ರಂದು ಮನೆಯ ತೋಟದಲ್ಲಿರುವ ಬಾವಿಯ ಕೆಸರನ್ನು ತೆಗೆಯಲು ಬಾವಿಗೆ ಇಳಿದಿದ್ದರು. ಕೆಲಸ ಮುಗಿಸಿ, ಹಗ್ಗದ ಸಹಾಯದಿಂದ ಮೇಲಕ್ಕೆ ಬರುವಾಗ ಆಕಸ್ಮಿಕವಾಗಿ ಕೈಜಾರಿ ಪುನಃ ಬಾವಿಗೆ ಬಿದ್ದಿದ್ದಾರೆ. ಅವರನ್ನು ಬಾವಿಯಿಂದ ಮೇಲಕ್ಕೆತ್ತಿ,ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮೇ 30ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.











