ಮಂಗಳೂರು, ಜೂ. 08 : ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ “ಕಜ್ಜ” ತುಳು ಚಲನಚಿತ್ರ ಜೂನ್ 11ರಂದು ಕರಾವಳಿ ಜಿಲ್ಲೆಗಳಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಾಹಿತ್ಯ ರಚನೆಕಾರ ಮೋಹನ್ ರಾಜ್ ಅವರು ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರವು ಜಿಷ್ಣು ಎಸ್. ಮೆನನ್ ಹಾಗೂ ಸಿದ್ದಾರ್ಥ್ ಶೆಟ್ಟಿ ಅವರ ನಿರ್ದೇಶನದಲ್ಲಿ, ವಿಶಾಂತ್ ಮಿನೆಜಿಸ್ ನಿರ್ಮಾಣ ಹಾಗೂ ಪ್ರವೀಣ್ ಸುವರ್ಣ ಅವರ ಸಹ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಚಿತ್ರವು ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳ, ಕುಂದಾಪುರ, ಬೆಳ್ತಂಗಡಿ, ಸುಳ್ಯ, ಮುಡಿಪು ಸೇರಿದಂತೆ ಕರಾವಳಿಯ ವಿವಿಧ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
“ಕಜ್ಜ” ಚಿತ್ರದಲ್ಲಿ ಸಿದ್ದಾರ್ಥ್ ಶೆಟ್ಟಿ, ಉಮೇಶ್ ಮಿಜಾರ್, ಅರವಿಂದ ಬೋಳಾರ್, ಸಂತೋಷ್ ಶೆಟ್ಟಿ, ಜಯಶೀಲಾ, ಉದಯ ಪೂಜಾರಿ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಪ್ರಜ್ವಲ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ನಟ ಸಿದ್ದಾರ್ಥ್ ಶೆಟ್ಟಿ, ನಿರ್ಮಾಪಕ ವಿಶಾಂತ್ ಮಿನೆಜಿಸ್, ಕಲಾವಿದರಾದ ಗೌತಮ್ ಬಂಗೇರ, ಉದಯ ಪೂಜಾರಿ, ಸಹನಾ ಸುಧಾಕರ್, ವಿಶ್ವಾಸ್ ಉಪಸ್ಥಿತರಿದ್ದರು.










