ಮಂಗಳೂರು,ಜೂ. 17 : ನಿರ್ದೇಶಕ ಪಿ.ವಿ. ಪ್ರದೀಪ್ ಕುಮಾರ್ ಅವರ ಕಲ್ಪನೆ ಹಾಗೂ ಸಾರಥ್ಯದಲ್ಲಿ ಮೂಡಿಬಂದಿರುವ ಎಐ ನಿರ್ಮಿತ ಕಿರುಚಿತ್ರ ‘ಅದಿತಿ’ ಇದರ ಪ್ರೀಮಿಯರ್ ಶೋ ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಪಿ.ವಿ. ಪ್ರದೀಪ್ ಕುಮಾರ್ ಅವರು ಮಾತಾಡಿ, ‘ಅದಿತಿ’ ಚಿತ್ರವು ಒಂದು ವಿಭಿನ್ನ ಶೈಲಿಯ ಸಸ್ಪೆನ್ಸ್, ಆಕ್ಷನ್ ಹಾಗೂ ಎಮೋಷನಲ್ ಲವ್ ಸ್ಟೋರಿಯನ್ನು ಒಳಗೊಂಡಿದೆ. ಚಿತ್ರದಲ್ಲಿ ಸಸ್ಪೆನ್ಸ್ ಮತ್ತು ರಹಸ್ಯಗಳ ಜೊತೆಗೆ ಪ್ರೇಮಕಥೆಯೂ ಇದೆ ಎಂದರು.
‘ಅದಿತಿ’ ಚಿತ್ರದ ಮೂಲಕ ದೊಡ್ಡ ಮಟ್ಟದ ಚಿತ್ರರಂಗದ ಪ್ರಯಾಣಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, ಹೊಸ ತಂತ್ರಜ್ಞಾನವಾದ ಎ ಐ ಸಹಾಯದೊಂದಿಗೆ ಈ ಚಿತ್ರದ ದೃಶ್ಯಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಕಥೆಗಾರನೊಬ್ಬನ ಕಲ್ಪನೆಗೆ ತಂತ್ರಜ್ಞಾನ ಸಾಥ್ ನೀಡಿದಾಗ ‘ಅದಿತಿ’ ಹೇಗೆ ಮೂಡಿಬಂದಿದ್ದಾಳೆ ಎಂಬುದನ್ನು ಮಾಧ್ಯಮಗಳ ಮುಂದೆ ತರಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಪತ್ರಿಕಾ ಭವನದ ಅಧ್ಯಕ್ಷರು ಪಿಬಿ ಹರೀಶ್ ರೈ, ಮಂಗಳೂರು ಪಿಂಗಾರ ಪತ್ರಿಕೆಯ ಸಂಪಾದಕರು ರೇಮಂಡ್ ಡಿಕುನ್ನ ತಾ ಕೋಡೆ, ಅದಿತಿ ಚಿತ್ರದ ನಿರ್ಮಾಪಕರು ಸುನಿತಾ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.











