ಮಂಗಳೂರು, ಜೂ.23 : ಕಲ್ಕೂರ ಪ್ರತಿಷ್ಠಾನ, ಮಂಗಳೂರು, ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ಮಾವು – ಹಲಸು ಮೇಳ ಜೂ. 20 ಶನಿವಾರ ಕದ್ರಿ ಕಂಬಳ, ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಸಾದ ಆವರಣದಲ್ಲಿ ನಡೆಯಿತು.
ಮೇಳವನ್ನು ಮಂಗಳಾದೇವಿ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಾವು – ಹಲಸು ಮೇಳವನ್ನುಇಲ್ಲಿನ ಮಂಜು ಪ್ರಸಾದ ಆವರಣದಲ್ಲಿ ಆಯೋಜಿಸಲಾಗಿದೆ ಇದೊಂದು ಉತ್ತಮ ಕಾರ್ಯ.ಸಸ್ಯ ಶ್ಯಾಮಲೆಯಾದ ಪ್ರಕೃತಿ ಮಾತೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿ ಸುವುದು ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯ ಡಾ| ಜೀವರಾಜ್ ಸೊರಕೆ, ಶರವು ರಾಘವೇಂದ್ರ ಶಾಸ್ತ್ರಿ ಕದ್ರಿ, ಡಾ| ಪ್ರಭಾಕರ ಅಡಿಗ, ಡಾ| ಹರಿಕೃಷ್ಣ ಪುನರೂರು, ಡಾ| ಎಂ. ಪ್ರಭಾಕರ ಜೋಶಿ ಮತ್ತಿತರರು ಉಪಸ್ಥಿತರಿದ್ದರು.
ಮೇಳದಲ್ಲಿ ರಾಮನಗರ ಕುಣಿಗಲ್ ಹಾಗೂ ಸ್ಥಳೀಯ ಭಾಗದ ಕೃಷಿಕರ ಹಲಸು ಮತ್ತು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ರೈತರಿಂದಲೇ ನೇರ ಮಾರಾಟವಾಯಿತು.











