ಬಜಪೆ ಜು. 07 : ಬಜಪೆ ವಲಯದ ಬಂಟರ ಸಂಘದಿಂದ ತಾರಿಕಂಬ್ಳದ ಮುಂಡಾರಿನಲ್ಲಿ ಬಂಟರ ಭವನಕ್ಕೆ ಶಿಲಾನ್ಯಾಸ ,ಸಾಧಕರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಸಹಾಯಧನ ವಿತರಣೆ ಕಾರ್ಯಕ್ರಮವು ಸಂಘದ ನಿವೇಶನ ಇರುವ ಬಜಪೆ ತಾರಿಕಂಬ್ಳ ಮುಂಡಾರಿನಲ್ಲಿ ನಡೆಯಿತು.

10 ಕೋ.ರೂ. ವೆಚ್ಚದಲ್ಲಿ ಬಜಪೆ ತಾರಿಕಂಬ್ಳದ ಮುಂಡಾರಿನಲ್ಲಿ ನಿರ್ಮಾಣವಾಗಲಿರುವ ನೂತನ ಬಂಟರ ಭವನದ ಶಿಲಾನ್ಯಾಸ ಎಂಆರ್ಜಿ ಗ್ರೂಪ್ಸ್ ನ ಸ್ಥಾಪಕ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ,ಇತರ ಗಣ್ಯರು ಸೇರಿ ನೆರವೇರಿಸಿದರು.
ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿ.ಕೆ ಗ್ರೂಪ್ ಆಫ್ ಕಂಪೆನಿಸ್ ಇದರ ಸಿಎಂಡಿ ಕರುಣಾಕರ ಶೆಟ್ಟಿ ಮಧ್ಯಗುತ್ತು ಅವರು ಕಟ್ಟಡದ ನೀಲನಕ್ಷೆ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಎಂಆರ್ಜಿ ಗ್ರೂಪ್ಸ್ ಇದರ ಸ್ಥಾಪಕ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟ ಅವರು ಮಾತನಾಡಿ, ದಾನಿಗಳ ಸಹಾಯದಿಂದ ನಿರ್ಮಾಣವಾಗಲಿರುವ ಈ ಬಂಟರ ಭವನದಲ್ಲಿ ಬಡವರಿಗೆ,ಸಮಾಜ ಬಾಂಧವರಿಗೆ ನೆರವಾಗುವ
ಕಾರ್ಯಕ್ರಮ ಗಳು ನಡೆಯಲಿ ಎಂದರು.
ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉದ್ಯಮಿ ಹೇರಂಭ ಇಂಡಸ್ಟ್ರೀಸ್ ಇದರ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಡಾ| ಕನ್ಯಾನ ಸದಾಶಿವ ಶೆಟ್ಟಿ ಮತ್ತು ಬರೋಡದ ಶಶಿ ಕೇಟರಿಂಗ್ ಇದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಶಿಧರ ಶೆಟ್ಟಿ ಬರೋಡ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ಧ ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಕರಂಬಾರು ಪಡುಮನೆ ಅವರು ಮಾತನಾಡಿ, ಬಡವರ ಶ್ರೇಯೋಭಿವೃದ್ಧಿಗೆ, ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಬಂಟರ ಭವನ ನಿರ್ಮಾಣವಾಗಲಿದೆ. ದಾನಿಗಳ ಸಹಾಯದಿಂದ ಈ ಬಂಟರ ಭವನ ನಿರ್ಮಾಣವಾಗಲಿದೆ. ಇಲ್ಲಿಯ ಕೆಲಸವನ್ನು ಪಾರದರ್ಶಕವಾಗಿ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಹೇರಂಭ ಇಂಡಸ್ಟ್ರೀಸ್ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಡಾ| ಕನ್ಯಾನ ಸದಾಶಿವ ಶೆಟ್ಟಿ ಮತ್ತು ಬರೋಡದ ಶಶಿ ಕೇಟರಿಂಗ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಶಿಧರ ಶೆಟ್ಟಿ ಬರೋಡ ಅವರನ್ನು ಸಮಾನಿಸಲಾಯಿತು.ಬಜಪೆ ಪ.ಪಂ. ಅಧ್ಯಕ್ಷ ಲೋಕೇಶ ಪೂಜಾರಿ, ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ ಸಹಾಯಧನ ವಿತರಣೆ ಮಾಡಿದರು. ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರುಗುತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತಿರಿಸಿದರು.
ಕಾರ್ಯಕ್ರಮದಲ್ಲಿ ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಕೆ. ಶೆಟ್ಟಿ ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನ್ಯಾಕ್, ಡಾ| ವೈ. ಭರತ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ, ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಮಲ್ಲಿಕಾ ವರಪ್ರಸಾದ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೀತಿ ಹರೀಶ್ ಶೆಟ್ಟಿ ಯುವ ವಿಭಾಗದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಡಾ| ಪ್ರಸಾದ್ ರೈ ಬಾಯಾರ್ ಗುತ್ತು, ಕುಸುಮಾಕರ ಆರ್. ಶೆಟ್ಟಿ, ಮೂತ್ತೂರು ಮಿತ್ತೂಟ್ಟು ಪ್ರಧಾನ ಕಾರ್ಯದರ್ಶಿ ಪುನೀತ್ ಮಾಡ ಕಲ್ಲಾಜೆ, ಕೋಶಾಧಿಕಾರಿ ಸುರೇಶ್ ಶೆಟ್ಟಿ, ಅರೆಕಲ್ಲು ಉಪಸ್ಥಿತರಿದ್ದರು.
ಸಂಘದ ಜತೆ ಕಾವ್ಯದರ್ಶಿ ಮಹೇಶ್ ಶೆಟ್ಟಿ, ಮೊಗರುಗುತ್ತು ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಮತ್ತು ನಿತೇಶ್ ಶೆಟ್ಟಿ ನಿರೂಪಿಸಿದರು. ಶಿಕ್ಷಕ ಜಯಕರ ಶೆಟ್ಟಿ ವಂದಿಸಿದರು.











