ಕಾರವಾರ, ಜು. 24: ಬಂದರಿನಲ್ಲಿ ನಿಲ್ಲಿಸಿದ್ದ ಪರ್ಷಿಯನ್ ಬೋಟ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಡೊಂಕದಲ್ಲಿ ನಡೆದಿದೆ.
ಆಯುಬ್ ಸಾಬ್ ಎಂಬವರಿಗೆ ಸೇರಿದ ಪರ್ಷಿಯನ್ ಬೋಟ್ ಇದಾಗಿದೆ.ಬಂದರಿನಲ್ಲಿ ಬೋಟ್ ನಿಲ್ಲಿಸಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಉರಿದಿದೆ ಎಂದು ವರದಿಯಾಗಿದೆ.
ಅಲ್ಲಿನ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ. ಬೋಟಿನ ಸಂಪೂರ್ಣ ಭಾಗ ಸುಟ್ಟು ಹೋಗಿದ್ದು, ಅದರಲ್ಲಿದ್ದ ಇಂಜಿನ್‌ಗಳು ಸಹ ಸುಟ್ಟುಹೋಗಿವೆ. ಈ ಘಟನೆಯಲ್ಲಿ 30 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಘಟನೆ ಸಂಬಂಧ ಘಟನೆ ಸಂಬಂಧ ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.











