ಮಂಗಳೂರು, ಅ. 25 : ದೇರಳಕಟ್ಟೆಯ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಅಕ್ಟೋಬರ್ 27 ಮತ್ತು 28ರಂದು ‘ಪ್ರೇರಣಾ ವಿಜ್ಞಾನೋತ್ಸವ–2026’ ಕಾರ್ಯಕ್ರಮವನ್ನು ದೇರಳಕಟ್ಟೆಯ ಫಾದರ್ ಮುಲ್ಲರ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ವಂ. ಫಾ. ಫಾಸ್ಟಿನ್ ಲೂಕಾಸ್ ಲೋಬೋ ಅವರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅಕ್ಟೋಬರ್ 27ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ದೇರಳಕಟ್ಟೆಯ ಫಾದರ್ ಮುಲ್ಲರ್ ಕ್ಯಾಂಪಸ್ ನ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂ. ಫಾಸ್ಟಿನ್ ಲೂಕಾಸ್ ಲೋಬೋರವರು ವಹಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಕ್ಸ್ ಮತ್ತು ಹಜ್ ಸಚಿವ ಯು. ಟಿ. ಖಾದರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಂಗಳೂರಿನ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ನ ಕಾರ್ಯದರ್ಶಿಗಳಾದ ವಂ. ಡಾ. ಪ್ರವೀಣ್ ಲಿಯೋ ಲಸ್ರಾಡೋ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಎರಡು ದಿನಗಳ ಈ ವಿಜ್ಞಾನೋತ್ಸವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಸೃಜನಶೀಲತೆ, ನಾವೀನ್ಯತೆ, ತಂಡದ ಸಹಕಾರ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾ ಡ್ಯೂಟಿಕಲ್ ಸೈನ್ಸಸ್ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯಟಿಕಲ್ ವಿಭಾಗಗಳ ಸಹಭಾಗಿತ್ವದಲ್ಲಿ ಆಯೋಜಿಸ ಲಾಗುತ್ತಿರುವ ಪ್ರೇರಣಾ ವಿಜ್ಞಾನೋತ್ಸವ 2026ರಲ್ಲಿ 50ಕ್ಕೂ ಹೆಚ್ಚು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಂದ 4,000ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಈ ಉತ್ಸವವು ಯುವ ಮನಸ್ಸುಗಳಿಗೆ ವಿಜ್ಞಾನವನ್ನು ಅನ್ವೇಷಿಸಲು, ತಮ್ಮಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಸೃಜನಶೀಲ ಮತ್ತು ನವೀನ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಮಹತ್ವದ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಅಕ್ಟೋಬರ್ 28ರಂದು ಸಂಜೆ 4:00 ಗಂಟೆಗೆ ಪ್ರೇರಣಾ ವಿಜ್ಞಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ವಂ.ಎಲ್. ಎಂ. ಪಿಂಟೋ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂ.ರೋಷನ್ ಕ್ರಾಸ್ತಾ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ವಿದ್ಯಾರ್ಥಿಗಳಿಗೆ ಈ ವಿಜ್ಞಾನ ವಸ್ತುಪ್ರದರ್ಶನದಲ್ಲಿ ವೈಜ್ಞಾನಿಕ ಪರಿಕಲ್ಪನೆಗಳು,ಮಾದರಿಗಳು ಹಾಗೂ ಅವುಗಳ ಪ್ರಾಯೋಗಿಕ ಅನ್ವಯಿಕೆಗಳನ್ನು ಅನ್ವೇಷಿಸಲು ಅವಕಾಶ ಕಲ್ಪಿಸುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಈ ವಸ್ತುಪ್ರದರ್ಶನದಲ್ಲಿ ನವೀನ ಮಾದರಿಗಳು ಮತ್ತು ವೈಜ್ಞಾನಿಕ ಪರಿಕಲ್ಪನೆಗಳನ್ನು ವೀಕ್ಷಿಸಲು ಉಚಿತವಾಗಿದ್ದು, ಯಾವುದೇ ನೋಂದಣಿ ಶುಲ್ಕ ಅಥವಾ ಪ್ರವೇಶ ಶುಲ್ಕ ಇರುವುದಿಲ್ಲ. ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಫ್ ಎಂಸಿಐ ನಿರ್ದೇಶಕರಾದ ವಂ. ಫಾಸ್ಟಿನ್ ಲೂಕಾಸ್ ಲೋಬೋ,ಎಫ್ ಎಂಎಚ್ ಎಂ ಸಿ ಮತ್ತು ಎಫ್ ಎಂಸಿಒಪಿಎಸ್ ಆಡಳಿತಾಧಿಕಾರಿ ವಂ.ಡೊನಾಲ್ಡ್ ನಿಲೇಶ್ ಕ್ರಾಸ್ತಾ,ಎಫ್ ಎಮ್ ಎಚ್ ಪಿ ಡಿ ಆಡಳಿತಾಧಿಕಾರಿ ವಂ. ನೆಲ್ಸನ್ ಧೀರಜ್ ಪಾಯಸ್,ಎಫ್ ಎಮ್ ಎಚ್ ಎಮ್ ಸಿ ಪ್ರಾಂಶುಪಾಲ ಡಾ. ಪ್ರಭು ಕಿರಣ್, ಎಫ್ ಎಮ್ ಸಿಒಪಿಎಸ್ ಪ್ರಾಂಶುಪಾಲ ಡಾ. ಸತೀಶ್, ಎಫ್ ಎಂ ಎಚ್ ಎಮ್ ಸಿ ಉಪ ಪ್ರಾಂಶು ಪಾಲರಾದ ಡಾ. ವಿಲ್ಮಾ ಮೀರಾ ಡಿಸೋಜಾ,ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನವಾಡ,ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಾ ಪಾಯಸ್, ಸಂಚಾಲಕರಾದ ಡಾ. ಇಂದು ಓ.ಎಸ್, ಸಹ- ಸಂಚಾಲಕರಾದ ನಿಶ್ಮಿತಾ, ಮಾಧ್ಯಮ ಸಂಯೋಜಕ ಡಾ. ಧೀರಜ್ ಫರ್ನಾಂಡಿಸ್, ಹಾಗೂ ಸಹ- ಸಂಯೋ ಜಕ ಡಾ. ಶ್ರೇಯಾಂಕ್ ಕೋಟ್ಯಾನ್ ಉಪಸ್ಥಿತರಿದ್ದರು.











