ಬೆಂಗಳೂರು : ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ, ಮಂದಿಯಲ್ಲಿ 10 ಮಂದಿ ಇಲ್ಲಿ ತನಕ ಪತ್ತೆಯಾಗಿಲ್ಲ ಎನ್ನಲಾಗಿದ್ದು, ಈ ಹತ್ತು ಮಂದಿ ಕೂಡ ಎಲ್ಲಿದ್ದಾರೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದುಕೊಂಡಿದೆ.
ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದವರ ಪತ್ತೆಯನ್ನು ಬಿಬಿಎಂಪಿಯಿಂದ ಮಾಡಲಾಗುತ್ತಿದ್ದು, ಕಳೆದ 15 ದಿನದಲ್ಲಿ 57 ಮಂದಿ ನಗರದಲ್ಲಿ ಬಂದಿದ್ದು, ಇಲ್ಲಿ ತನಕ 47 ಮಂದಿ ಮಾತ್ರ ಸಿಕ್ಕಿದ್ದು, ಉಳಿದವರು ಎಲ್ಲಿದ್ದಾರೆ ಎನ್ನುವುದು ಈಗ ಬಿಬಿಎಂಪಿಗೆ, ಸರ್ಕಾರಕ್ಕೆ, ಗೃಹ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ದ.ಆಫ್ರಿಕಾದಿಂದ ಬೆಂಗಳೂರಿಗೆ/ರಾಜ್ಯಕ್ಕೆ ಬಂದಿದ್ದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿದ್ದು, ಹೊಸ ವೈರಸ್ ಸೋಂಕು ಇಲ್ಲದೇ ಹೋದರು ಕೂಡ ಕ್ವಾರಂಟೈನ್ ಮುಗಿದ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ.