ಮಂಗಳೂರು :ಪೊಳಲಿ ಜಾತ್ರೆ ಎಂದರೆ ಒಂದೆರಡು ದಿನಗಳ ಸಂಭ್ರಮವಲ್ಲ ಇದು ಒಂದು ತಿಂಗಳ ಕಾಲ ನಡೆಯುವ ಉತ್ಸವವಾಗಿದೆ. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರೋತ್ಸವದ ಪ್ರಮುಖ ಆಕರ್ಷಣೆ ಪೊಳಲಿ ಚೆಂಡು ಉತ್ಸವ ಆಗಿದೆ. ಐದು ದಿನಗಳ ಕಾಲ ನಡೆಯುವ ಚೆಂಡು ಉತ್ಸವ ಭಕ್ತರ ಆಕರ್ಷಣೆಯ ಕಾರ್ಯಕ್ರಮವಾಗಿದ್ದು, ಕಾಲ್ಚೆಂಡು ಆಟದ ರೀತಿ ದೇವಳದ ಎದುರಿನ ಗದ್ದೆಯಲ್ಲಿ ರಬ್ಬರ್ ಚೆಂಡಿನಲ್ಲಿ ಭಕ್ತರು ಆಟ ಆಡುತ್ತಾರೆ
ಈ ಬಾರಿಯಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯು 07-04-2022 ರಿಂದ 14-04-2022ರ ತನಕ ಸಂಭ್ರಮದಿಂದ ಜರುಗಿತು. ಏಪ್ರಿಲ್ 14, ಗುರುವಾರ ರಾತ್ರಿ ಕ್ಷೇತ್ರದ ಪ್ರಧಾನ ದೈವ ಶ್ರೀ ಕೊಡಮಣಿತ್ತಾಯ ನೇಮೋತ್ಸವ ನಡೆದಿದ್ದು,ಸಂಪೋಕ್ಷಣೆ,ಮಂತ್ರಾಕ್ಷತೆಯೊಂದಿಗೆ ಈ ಬಾರಿಯ ಪೊಳಲಿ ಜಾತ್ರಾ ಮಹೋತ್ಸವವು ಸಮಾಪನಗೊಂಡಿದೆ.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಊರಪರವೂರ ಭಕ್ತಭಿಮಾನಿಗಳು ಭಾಗವಹಿಸಿದ್ದರು.