ಉಳ್ಳಾಲ : ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ನಲ್ಲಿರುವ ಗ್ರಾಮ ಪಂಚಾಯತ್ ಕಚೇರಿ ಬಳಿಯ ಹತ್ತಿ ದಾಸ್ತಾನು ಗೋದಾಮು ಮತ್ತು ಹತ್ತಿ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿ ಘಟಕ ಭಾಗಶಃ ಸುಟ್ಟು ಹೋಗಿದೆ. ಈ ಘಟನೆ ಜೂ.22, ಮಂಗಳವಾರ ಸಂಜೆ ಸಂಭವಿದ್ದು, 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಉಳ್ಳಾಲದ ಉದ್ಯಮಿ ನೌಮಾನ್ ಮಾಲಿಕತ್ವದ ಕೋಡಿ ಎಂಟರ್ ಪ್ರೈಸಸ್ ಹತ್ತಿ ದಾಸ್ತಾನು ಹಾಗೂ ತಯಾರಿಕಾ ಕೇಂದ್ರ ಇದಾಗಿದೆ. ಬೆಂಕಿ ತಗುಲಿದ ತತ್ಕ್ಷಣ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನಪಟ್ಟರು. ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ಆಗಮಿಸಿದಾಗ ಗೋದಾಮು, ಯಂತ್ರಗಳು ಭಾಗಶಃ ಬೆಂಕಿಗೆ ಆಹುತಿಯಾಗಿದ್ದವು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.