ಕುಂದಾಪುರ, ಡಿ. 31: ಆನೆಗುಡ್ಡೆ ದೇವಸ್ಥಾನದ ಬಳಿ ನಿಲ್ಲಿಸಿದ ಬಸ್ಸಿನ ಟಾಪ್ ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ಕುಂಬಾರಪೇಟೆ ಬಾಪೂಜಿ ನಗರದ ನಿವಾಸಿ ಶ್ರೀನಾಥ್ (25) ಮೃತಪಟ್ಟ ವ್ಯಕ್ತಿ .
ಡಿಸೆಂಬರ್ 28 ರಂದು ಶಬರಿಮಲೆ ಯಾತ್ರೆ ಮುಗಿಸಿ ಬಂದು ಕುಂದಾಪುರದ ಆನೆಗುಡ್ಡೆ ದೇವಸ್ಥಾನದ ಬಳಿ ನಿಲ್ಲಿಸಿದ ಬಸ್ಸಿನ ಟಾಪ್ ನಲ್ಲಿ ಮಲಗಿದ್ದರು. ಆಕಸ್ಮಿಕವಾಗಿ ಬಸ್ಸಿನ ಮೇಲಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿ ದ್ದು, ಆಸ್ಪತ್ರೆಗೆ ದಾಖ ಲಿಸ ಲಾಗಿತ್ತು. ಆದರೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ