ಕುಂದಾಪುರ, ಫೆ. 14 : ಬೈಕ್ ಗೆ ಪಿಕಪ್ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಇಡೂರು- ಕುಂಜ್ಞಾಡಿ ಗ್ರಾಮದ ಜನ್ನಾಲ್ ಮೇಲ್ಜಡ್ಡು ಸಮೀಪ ಫೆ. 13,ಸೋಮವಾರ ಸಂಜೆ ನಡೆದಿದೆ. ಮೃತರನ್ನುಹಾರ್ಮಣ್ ನಿವಾಸಿ ಪ್ರಜ್ವಲ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.
ಸೋಮವಾರ ಪ್ರಜ್ವಲ್ ಶೆಟ್ಟಿ ಎಂಬವರು ತನ್ನ ಶೈನ್ ಬೈಕಿನಲ್ಲಿ ಹಾರ್ಮಣ್ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಯತೀಶ್ ಎಂಬಾತ ಪಿಕಪ್ ವಾಹನವನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಇಡೂರು- ಕುಂಜ್ಞಾಡಿ ಗ್ರಾಮದ ಜನ್ನಾಲ್ ಮೇಲ್ಜಡ್ಡು ಸಮೀಪ ಕೊಲ್ಲೂರು ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.