ಪುತ್ತೂರು, ಫೆ. 21 : ದ್ವಿಚಕ್ರ ವಾಹನದ ಮೇಲೆ ಬೊಲೆರೋ ಉರುಳಿ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ಫೆ.20 ಸೋಮವಾರ ನಡೆದಿದೆ. ಮೃತರನ್ನು ಕೊಯಿಲ ಗ್ರಾಮದ ಕಡೆಂಬ್ಯಾಲು ನಿವಾಸಿ ಕೊರಗಪ್ಪ ಗೌಡ (58) ಎಂದು ಗುರುತಿಸಲಾಗಿದೆ.
ಬೊಲೆರೋ ಪಿಕಪ್ ಕಡಬದಿಂದ ಬರುತ್ತಿದ್ದು, ಓಡ್ಲಾ ಎಂಬಲ್ಲಿ ದಿಢೀರ್ ಬ್ರೇಕ್ ಹಾಕಿದ ಪರಿಣಾಮವಾಗಿ ಬೊಲೆರೋ ಪಲ್ಟಿಯಾಗಿ ಕೊರಗಪ್ಪ ಅವರು ಚಲಾಯಿಸುತ್ತಿದ್ದ ಬೈಕ್ ಮೇಲೆ ಬಿದ್ದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಕೊರಗಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸ್ವಲ್ಪ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ