ಹೆಬ್ರಿ, ಫೆ. 26 : ದಿನನಿತ್ಯ ಕುಡಿದು ಬಂದು ತಂದೆಯೊಂದಿಗೆ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆ ಕೊಲೆ ಮಾಡಿದ ಘಟನೆ ವರಂಗ ಗ್ರಾಮದ ಮೂಡುಬೆಟ್ಟುವಿನಲ್ಲಿ ನಡೆದಿದೆ.
ಸತೀಶ್ ಪೂಜಾರಿ(40) ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಕುಟ್ಟಿ ಪೂಜಾರಿ ಎಂದು ಗುರುತಿಸಲಾಗಿದೆ.
ಸತೀಶ್ ಪೂಜಾರಿ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ಶುಕ್ರವಾರ ರಾತ್ರಿಯು ಸತೀಶ್ ಪೂಜಾರಿ ವಿಪರೀತ ಕುಡಿದು ಬಂದು ತಂದೆ ಕುಟ್ಟಿ ಪೂಜಾರಿ ಮಲಗಿದ್ದ ಕೋಣೆಯ ಬಾಗಿಲಿಗೆ ಕಾಲಿನಿಂದ ಒದ್ದು ಕುಟ್ಟಿ ಪೂಜಾರಿಯವರನ್ನು ಮನೆಯ ಹೊರಗೆ ಅಂಗಳಕ್ಕೆ ಎಳೆದು ತಂದಾಗ ಕೋಪಗೊಂಡ ಕುಟ್ಟಿ ಪೂಜಾರಿಯು ಅಡುಗೆ ಕೋಣೆಯಲ್ಲಿದ್ದ ಒಲೆ ಬೆಂಕಿ ಊದುವ ಕಬ್ಬಿಣದ ಕೊಳವೆಯಿಂದ ಸತೀಶ ಪೂಜಾರಿ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.