ನೆಲ್ಯಾಡಿ, ಜೂ. 14 : ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಮಂಗಳೂರಿನ ಪಂಪ್ವೆಲ್ ನಲ್ಲಿ ನಡೆದಿದೆ.
ಇಚ್ಚಂಪಾಡಿ ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ವಾಮನ ದಂಪತಿ ಪುತ್ರ ಸಂದೇಶ್ (25) ಮೃತಪಟ್ಟ ಯುವಕ.
ಸಂದೇಶ್ ಅವರು ಬೆಂದೂರ್‌ವೆಲ್‌ನಲ್ಲಿರುವ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ಸ್ಕೂಟಿಯಲ್ಲಿ ರೂಮ್ ಗೆ ತೆರಳುವ ವೇಳೆ ಪಂಪ್ ವೆಲ್ ನಲ್ಲಿ ಅಪಘಾತ ಸಂಭವಿಸಿದೆ.
ಗಂಭೀರ ಗಾಯಗೊಂಡಿದ್ದ ಸಂದೇಶ್ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.