ಉಳ್ಳಾಲ, ನ. 22 : ಕಂಕನಾಡಿಯ ಕಾಂಚನ ಷೋರೂಮಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಯುವಕನೊಬ್ಬ ಮುಡಿಪು ಸಮೀಪದ ಕಾರಿನ ಗ್ಯಾರೇಜ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ಮುಡಿಪು ಗರಡಿಪಳ್ಳ ನಿವಾಸಿ ಕಿಶೋರ್ (25) ಎಂದು ಗುರುತಿಸಲಾಗಿದೆ.
ನ.20 ರಂದು ಕೆಲಸಕ್ಕೆ ಹೋದವರು ತಡರಾತ್ರಿಯಾದರೂ ಮನೆಗೆ ವಾಪಸ್ಸಾಗದೇ ಇರುವುದನ್ನು ಗಮನಿಸಿ ಮನೆಯ ಸುತ್ತ, ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ಬಳಿಕ ನಿತ್ಯ ಕಿಶೋರ್ ಕೆಲಸದಿಂದ ವಾಪಸ್ಸಾಗಿ ಕುಳಿತುಕೊಳ್ಳುವ ಗ್ಯಾರೇಜ್ ಸಮೀಪ ಹುಡುಕಾಡಿ. ಒಳಗಡೆ ಹೋಗಿ ಗಮನಿಸಿದಾಗ ನೇಣುಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದಿದೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.