ಮಂಗಳೂರು, ನ. 14 : ರಾಜಾ ಕಟಪಾಡಿ ಅವರ ನಿರ್ದೇಶನದಲ್ಲಿ, ಕಟೀಲ್ ಪ್ರಸಾದ್ ಪ್ರೊಡಕ್ಷನ್ಸ್ ಕಟಪಾಡಿ ಲಾಂಛನದಲ್ಲಿ ನಿರ್ಮಾಣಗೊಂಡ ‘ಬೆಲ್ಲದಗಟ್ಟಿ’ ತುಳು ಚಲನಚಿತ್ರ ನವೆಂಬರ್ 20ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ರಾಜ ಕಟಪಾಡಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಸುಜೀರ್ ಬಾರ್ದಿಲಾ ಇವರು ನಿರ್ಮಾಪಕರಾಗಿ ಚಲನಚಿತ್ರಕ್ಕೆ ಬಂಡವಾಳ ಹೂಡಿದ್ದು, ಜಗತ್ ರಾಜಪಾಲ್ ಬಿಕರ್ಣಕಟ್ಟೆ ಇವರ ಪ್ರೇರಣೆಯೊಂದಿಗೆ ಚಿತ್ರವು ನಿರ್ಮಾಣಗೊಂಡಿದೆ ಎಂದರು.
ಈ ಚೊಚ್ಚಲ ಚಿತ್ರದ ನಿರ್ದೇಶನ, ಕಥೆ ಹಾಗೂ ಸಂಭಾಷಣೆಯನ್ನು ರಾಜಾ ಕಟಪಾಡಿ ನಿರ್ವಹಿಸಿದ್ದಾರೆ.ಸಂಕಲನ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಪ್ರಜ್ವಲ್ ಸುವರ್ಣ ನಿರ್ವಹಿಸಿದ್ದಾರೆ, 5.1 ಲೋಯ್, ಮಂಗಳೂರು, ಸಂಗೀತ ನಿರ್ದೇಶನ ಸಂದೇಶ್ ಬಾಬಣ್ಣ, ಹಿನ್ನೆಲೆ ಗಾಯಕರು ಸಮನ್ವಿ ರೈ. ಪುತ್ತೂರು ಹಾಗೂ ಕೆ.ಪಿ ಮಿಲನ್.ಈ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಶನ್ ಕಡೆಯಿಂದ “ಯು.ಎ” ಪ್ರಮಾಣಪತ್ರ ದೊರೆತಿದೆ ಎಂದು ತಿಳಿಸಿದರು.
ನವೆಂಬರ್ 20ರಂದು ಪೂರ್ವಾಹ್ನ ಗಂಟೆ 9.30ಕ್ಕೆ ಪ್ರದರ್ಶನ ಕಾರ್ಯಕ್ರಮ ಮಂಗಳೂರಿನ ಭಾರತ್ ಮಾಲ್ ನಲ್ಲಿರುವ ಭಾರತ್ ಸಿನಿಮಾ ಥಿಯೇಟರ್ ನಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಬ್ರಿಜೇಶ್ ಚೌಟ, ಸಂಸದರು, ವೇದವ್ಯಾಸ ಕಾಮತ್, ಶಾಸಕರು ಹಾಗೂ ಪದ್ಮರಾಜ್ ಆರ್. ಪೂಜಾರಿ, ಅಧ್ಯಕ್ಷರು, ದ.ಕ ಜಿಲ್ಲಾ ಕಾಂಗ್ರೆಸ್ ಇವರುಗಳು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡುವರು ಎಂದರು.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮನೋಹರ್ ಶೆಟ್ಟಿ ನಂದಳಿಕೆ, ಸುಜಾತಾ ಶಕ್ತಿ ನಗರ, ವಿಜಿತ್ ಕೋಟ್ಯಾನ್, ಸುನಿಲ್ ನೆಲ್ಲಿಗುಡ್ಡೆ, ಕಿಶ್ಮಿತಾ ನವೀಶ್, ನಿತೇಶ್ ರಾಜ್, ಅಪೇಕ್ಷಾ ಶೆಟ್ಟಿ, ಸುಜಾತಾ ಶೆಟ್ಟಿ ಪೆರಿಂಜೆ, ಸೊಹಾನಾ ಶಂಕರ್, ಜಯಕರ್ ಕುಂದರ್, ದೀಕ್ಷಾ ಬ್ರಹ್ಮಾವರ, ಗುಣಪ್ರಸಾದ್, ಮಾ. ಕರಣ್, ಚೈತಾಲಿ ಶೇಟ್, ದೇಶ್ಯಾ ಮತ್ತಿತರ ಉದಯೋನ್ಮುಖ ಕಲಾವಿದರು ಅಭಿನಯಿಸಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಗತ್ ರಾಜ್ ಪಾಲ್ ಭಂಡಾರಿ ಬಿಕರ್ನಕಟ್ಟೆ, ನಿರ್ಮಾಪಕ ರಾಮಕೃಷ್ಣ ಸುಜಿರ್ ಬರ್ದಿಲ, ವಿಜಿತ್ ಕೋಟ್ಯಾನ್, ಬಾಲನಟ ಕರಣ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.









