ಮಂಗಳೂರು, ನ.09 : ನಗರದ ಪಂಪ್ ವೆಲ್ ನಲ್ಲಿರುವ ಲೋಟಸ್ ಗ್ಯಾಲಕ್ಸಿ ಕಟ್ಟಡದಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ರವಿವಾರ ಬೆಳಗ್ಗೆ ಶುಭಾರಂಭಗೊಂಡಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ನೂತನ ಉದ್ಯಮದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತಾಡಿದ ಎಸ್ ಎಲ್ ಶೇಟ್ ಡೈಮಂಡ್ ಹೌಸ್ ಮಾಲಕರಾದ ರವೀಂದ್ರ ಶೆಟ್ ಅವರು, ಚಿತ್ರನಟ ವಿನೀತ್ ಕುಮಾರ್, ಸಮತಾ ಅಮೀನ್, ನಿತಿನ್ ರಾಜ್ ಶೆಟ್ಟಿ , ದೀಕ್ಷಾ ಶೆಟ್ಟಿ ಹಾಗೂ ಸ್ನೇಹಿತರ ಈ ಹೊಸ ಉದ್ಯಮ ವನ್ನು ಪ್ರಾರಂಭಿಸಿದ್ದಾರೆ. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಡಾ.ದೇವರಾಜ್ ಆಚಾರ್ಯ ಅವರು ಮಾತಾಡಿ, ವಿನೀತ್ ನನ್ನ ವಿದ್ಯಾರ್ಥಿ. ಅವರು ಹೊಸ ಉದ್ಯಮ ಆರಂಭಿಸಿದ್ದಾರೆ. ಅವರ ಹೊಸ ಉದ್ಯಮಕ್ಕೆ ಶುಭಹಾರೈಸಿದರು.
ಉದ್ಯಮಿ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ ಅವರು ಮಾತಾಡಿ, ಮಂಗಳೂರು ರಾಜ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇಂತ ನಗರಕ್ಕೆ ಹೊಸ ಹೊಸ ಉದ್ಯಮಗಳು ಕಾಲಿಡುತ್ತಿರುವುದು ಖುಷಿಯ ವಿಚಾರ. ವಿನೀತ್ ಹಾಗೂ ಸ್ನೇಹಿತರ ಹೊಸ ಉದ್ಯಮಕ್ಕೆ ಶುಭಹಾರೈಸಿದರು.
ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಅವರು ವಿನೀತ್ ಹಾಗೂ ಸ್ನೇಹಿತರ ಹೊಸ ಉದ್ಯಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ರಕ್ಷಿತ್ ರಾವ್, ಅರವಿಂದ್ ಬೋಳಾರ್, ಜಗನ್ನಾಥ ಶೆಟ್ಟಿ ಬಾಳ , ಸುಧಾಂಜಿ, ವಿಖ್ಯಾತ್, ಮಯೂರ್, ಅಶ್ವಿನ್, ಆನಂದ ಕುಂಪಲ, ಆರ್.ಜೆ.ಶಾಹಿಲ್ ಹಾಗೂವಿನೀತ್ ಕುಮಾರ್, ಸಮತಾ ಅಮೀನ್, ನಿತಿನ್ ರಾಜ್ ಶೆಟ್ಟಿ, ದೀಕ್ಷಾ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.











