ಮಂಗಳೂರು, ನ.07 : ಶರಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕರಾವಳಿ ಚಿತ್ರಕಲಾ ಚಾವಡಿ ಮಂಗಳೂರು ಇದರ ಸಹಯೋಗದೊಂದಿಗೆ 2027ರ ಜನವರಿ 8, 9 ಮತ್ತು 10ರಂದು ಮಂಗಳೂರಿನಲ್ಲಿ ನಡೆಯಲಿರುವ ಕಲಾಪರ್ಬ – ರಾಷ್ಟ್ರೀಯ ಕಲೋತ್ಸವದ ಪೋಸ್ಟರ್ ಅನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರು ಮಂಗಳೂರಿನಲ್ಲಿರುವ ಪ್ರಸಾದ್ ಆರ್ಟ್ ಗ್ಯಾಲರಿ, ಇಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷರಾದ ಕೋಟಿ ಪ್ರಸಾದ್ ಆಳ್ವ, ಗೌರವಾಧ್ಯಕ್ಷರಾದ ಗಣೇಶ ಸೋಮಯಾಜಿ, ಉಪಾಧ್ಯಕ್ಷರಾದ ಶರತ್ ಹೊಳ್ಳ, ಕಾರ್ಯದರ್ಶಿಗಳಾದ ಡಾ. ಜಯಪ್ರಕಾಶ್ ಬಿ. ಪುನೀಕ್ ಶೆಟ್ಟಿ, ಕಲಾವಿದರಾದ ಈರಣ್ಣ ತಿಪ್ಪಣ್ಣವರ, ಜಾನ್ ಚಂದ್ರನ್ ಡಾ. ಝುಬೈರ್ ಖಾನ್ ಕುಡ್ಲ ಹಾಗೂ ಶರಧಿ ಪ್ರತಿಷ್ಠಾನದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯುವ ಈ ಚಿತ್ರ ಕಲಾ ಮೇಳದಲ್ಲಿ ಈ ಬಾರಿ ವಿಶೇಷವಾಗಿ ಮಕ್ಕಳಿಂದ ವಿಶ್ವ ದಾಖಲೆ ಚಿತ್ರಕಲಾ ಕಾರ್ಯಕ್ರಮ ನಡೆಯಲಿದೆ.
ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರಾದ ಯು.ಟಿ. ಖಾದರ್ ಅವರು, ರಾಷ್ಟ್ರೀಯ ಮಟ್ಟದ ಈ ಕಲೋತ್ಸವವು ಕರಾವಳಿ ಭಾಗದ ಕಲಾವಿದರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುವುದರೊಂದಿಗೆ ಕಲಾ ಸಂಸ್ಕೃತಿಯ ವಿನಿಮಯ ಮತ್ತು ಪ್ರೋತ್ಸಾಹಕ್ಕೆ ಮಹತ್ವದ ಅವಕಾಶವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಯೋಗ ಗುರು ಜಗದೀಶ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.











