ಹಿರಿಯಡ್ಕ, ಡಿ. 26 : ಈಜಲು ತೆರಳಿದ್ದ ಯುವಕನೊಬ್ಬ ಹೊಳೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೈರಂಪಳ್ಳಿ ಗ್ರಾಮದ ಕೆ.ಸಿ.ರೋಡ್ನ ಪಟ್ಟಿಬಾವು ಹೊಳೆಯಲ್ಲಿ ನಡೆದಿದೆ.
ಮೃತರನ್ನು ಅಜಯ್ (21) ಎಂದು ಗುರುತಿಸಲಾಗಿದೆ. ರವಿವಾರದಂದು ವಾಲಿಬಾಲ್ ಆಟ ಆಡಿದ ಬಳಿಕ ಅಜಯ್ ತಾನು ಈಜಿಕೊಂಡು ನದಿಯ ಇನ್ನೊಂದು ದಡಕ್ಕೆ ಹೋಗುವುದಾಗಿ ಸ್ನೇಹಿತರತ್ತಿರ ಹೇಳಿ ಹೊಳೆಗೆ ಇಳಿದಿದ್ದು, ಮಧ್ಯದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.