ಕೊಣಾಜೆ, ಏ 09 : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಉರುಮಣೆ ಸಮೀಪ ರವಿವಾರ ನಡೆದಿದೆ.
ಮೃತರನ್ನು ಸಫ್ವಾನ್ (24) ಎಂದು ಗುರುತಿಸಲಾಗಿದೆ.
ಸಫ್ವಾನ್ ನ ಮನೆಯವರೆಲ್ಲಾ ಇಫ್ತಾರ್ ಕೂಟಕ್ಕೆ ತೆರಳಿದ್ದರು. ಈ ವೇಳೆ ಸಫ್ವಾನ್ ಮನೆಯ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎನ್ನಲಾಗಿದೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.