ಕೊಣಾಜೆ, ಏ. 21 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳೂರು ವಿದಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವರ, ಏ.14 ರಂದು ಬಿರುಸಿನ ಪ್ರಚಾರ ನಡೆಸಿದರು.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತೊಕ್ಕೊಟ್ಟು, ಕುತ್ತಾರು ಭಾಗ ಸೇರಿದಂತೆ ಅಂಬ್ಲಮೊಗರು, ಗ್ರಾಮಚಾವಡಿ, ಅಸೈಗೋಳಿ, ಕೊಣಾಜೆ, ಮುಡಿಪು, ನರಿಂಗಾನ, ಚೇಳೂರು, ಕಂಬಳಪದವು, ಬೋಳಿಯಾರ್, ಮಂಜನಾಡಿ ಮೊದಲಾದೆಡೆ ಮತಯಾಚನೆ ನಡೆಸಿದರು.