ಕಡಬ, ಮೇ.13: ರೈಲು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕಡಬ ಎಡಮಂಗಲ ರೈಲು ನಿಲ್ದಾಣ ಸಮೀಪ ಶನಿವಾರ ನಡೆದಿದೆ.
ಮೃತರನ್ನು ಎಡಮಂಗಲ ಗ್ರಾಮದ ಡೆಕ್ಕಳ ನಿವಾಸಿ ಮಹಾಲಿಂಗ ನಾಯ್ಕ್(60) ಎಂದು ಗುರುತಿಸಲಾಗಿದೆ.
ಮಹಾಲಿಂಗ ನಾಯ್ಕ ಅವರು ರೈಲ್ವೇ ಹಳಿಯಲ್ಲಿ ಶನಿವಾರ ಸಂಜೆ ವೇಳೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ರೈಲು ಢಿಕ್ಕಿಯಾಗಿರಬಹುದು ಎಂದು ಶಂಕಿಸಲಾಗಿದೆ.