ಮಂಗಳೂರು,ಮೇ23 : ಎಂಡೋ ಸಂತ್ರಸ್ತರ ಹಾಗೂ ತುಳುನಾಡಿನ ದೈವ ದೇವರ ಕಥೆಯನ್ನೊಳಗೊಂಡ ಬಲಿಪೆ ತುಳು ಚಲನಚಿತ್ರವು ಮೇ 24ರಂದು ಕರಾವಳಿಯದ್ಯಂತ ಬಿಡುಗಡೆಗೊಳ್ಳಲಿದೆ. ತುಳುನಾಡಿನ ಶ್ರೀ ಕ್ಷೇತ್ರ ಪೆರಾರ,ಕಾರಂಜಿ ಕ್ಷೇತ್ರ,ಬಜ್ಪೆ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವ ದಯಾನಂದ ಕತ್ತಲ್ ಸಾರ್ ಅವರು ಪತ್ರಿಕಾ ಭವನದಲ್ಲಿ ನಡೆದಿರುವ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಈ ಚಿತ್ರದಲ್ಲಿ , ನಿರ್ಮಾಪಕರಾಗಿ ಹೇಮಂತ್ ಸುವರ್ಣ,ನಾಯಕ ನಟನಾಗಿ ಹರ್ಷಿತ್ ಬಂಗೇರ ,ನಾಯಕಿಯಾಗಿ ಅಂಕಿತಾ ಪಟ್ಲ ಮುಖ್ಯ ಪಾತ್ರದಲ್ಲಿ ಅರವಿಂದ್ ಬೋಳಾರ್,ರಚನೆ – ನಿರ್ದೇಶನ ಪ್ರಸಾದ್ ಪೂಜಾರಿ, ಆಕಾಶ್ ರೆಡ್ಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ನಿರ್ಮಾಪಕರಾದ ಹೇಮಂತ್ ಸುವರ್ಣ,,ನಾಯಕ ನಟ ಹರ್ಷಿತ್ ಬಂಗೇರ,ನಾಯಕಿ ಅಂಕಿತಾ ಪಟ್ಲ ರಚನೆ- ನಿರ್ದೇಶಕ ಪ್ರಸಾದ್ ಪೂಜಾರಿ, ಆಕಾಶ್ ರೆಡ್ಡಿಮೊದಲಾದವರು ಉಪಸ್ಥಿತರಿದ್ದರು.