ಬೆಂಗಳೂರು, ಜು. 07 : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪವಿತ್ರಾ ಗೌಡ ಸೇರಿ 17 ಆರೋಪಿಗಳಿಗೆ ಜು.18 ರ ವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ.
ಈ ಪ್ರಕರಣದ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಜು.4ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಗುರುವಾರ ಪರಪ್ಪನ ಅಗ್ರಹಾರ ಹಾಗೂ ತುಮಕೂರು ಜೈಲಿನಲ್ಲಿರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಕೊರ್ಟಿಗೆ ಹಾಜರುಪಡಿಸಲಾಗಿತ್ತು. ಕಾನ್ಫರೆನ್ಸ್ ವೇಳೆ ಪ್ರತಿಯೊಬ್ಬರ ಹೆಸರನ್ನೂ ಕೋರ್ಟ್ ಸಿಬ್ಬಂದಿ ಕೂಗಿದ್ದರು. ಹೆಸರು ಕೂಗುತ್ತಿದಂತೆ ಎಲ್ಲರೂ ಕೈ ಎತ್ತಿ ಹಾಜರಿ ಖಾತರಿಪಡಿಸಿದ್ದರು.
ಸರಕಾರ ಪರ ವಕೀಲರು ನ್ಯಾಯಾಂಗ ಅವಧಿಯನ್ನು ಮುಂದುವರೆಸಬೇಕೆಂದು ರಿಮ್ಯಾಂಡ್ ಅರ್ಜಿ ಸಲ್ಲಿಸಿದರು. ಇದೇ ವೇಳೆ ನಟ ದರ್ಶನ್, ಪವಿತ್ರಾಗೌಡ ಪರ ವಕೀಲರು ವಾದ ಮಂಡಿಸಿದರು. ವಾದ-ಪ್ರತಿವಾದಗಳ ಆಲಿಸಿದ ನ್ಯಾಯಾಲಯ ನ್ಯಾಯಾಂಗ ಬಂಧನ ಅವಧಿಯನ್ನು ಮುಂದುವರೆಸಿ ಆದೇಶ ನೀಡಿದೆ.