ಮಂಗಳೂರು,ಆ.15 : ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳ ಯುವರ್ ಪ್ರೆಸ್ಟೀಜ್ ಶೋ ರೂಮ್ ನ ಉದ್ಘಾಟನಾ ಸಮಾರಂಭವು ಆಗಸ್ಟ್ 16, ಶುಕ್ರವಾರ ಜೆಪ್ಪಿನಮೊಗರುವಿನಲ್ಲಿ ನಡೆಯಲಿದೆ ಎಂದು ಸಂಸ್ಥಾಪಕರಾದ ಶಂಶುದ್ದೀನ್ ಅವರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯುವರ್ ಪ್ರೆಸ್ಟೀಜ್ ಮೊದಲ ಶೋ ರೂಮ್ ದೇರಳಕಟ್ಟೆಯಲ್ಲಿ ಪ್ರಾರಂಭವಾಯಿತು. ನಂತರ ಪಾಂಡೇಶ್ವರಕ್ಕೆ ವಿಸ್ತರಣೆಯಾಯಿತು. ತದನಂತರ ಮೂಡಬಿದ್ರಿ, ಪುತ್ತೂರಿನಲ್ಲಿ ಶೋ ರೂಮ್ ಪ್ರಾರಂಭವಾಯಿತು.
ಯುವರ್ ಪ್ರೆಸ್ಟೀಜ್ ಶೋ ರೂಮ್ ನ ಸಂಸ್ಥಾಪಕರು ಶಂಶುದ್ದೀನ್, ಸಹ-ಸಂಸ್ಥಾಪಕರಾಗಿ ಬಶೀರ್. ಇತರ ಪಾಲುದಾರರು ; ಮಿಸ್ಟರ್ ಅದಿಲ್ ಮತ್ತು ಮಿಸ್ಟರ್ ಇಟ್ಬಾಲ್ (ಅಕ್ಕು ಪ್ರೆಜ್, ಮೂಡಬಿದ್ರಿ), ಮಿಸ್ಟರ್ ಸಲ್ಮಾನ್ ಮತ್ತು ಮಿಸೈಲ್ ಅಶ್ರಫ್ (ಡಿಪೋ), ಮಿಸ್ಟರ್ ಶಾಝ್ (ಪ್ರೋ ಪುಜ್, ಪುತ್ತೂರು), ಮಿಸ್ಟರ್ ರಶೀದ್ & ಮಿಸ್ಟರ್ ಫಜಲ್ ಆಗಿರುತ್ತಾರೆ ಎಂದು ಸಂಸ್ಥಾಪಕರಾದ ಶಂಶುದ್ದೀನ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.