ಬೆಂಗಳೂರು,ಡಿ.2 : ಕೆ.ವಿ.ಎನ್ ಪ್ರೊಡಕ್ಷನ್ಸ್ ಮತ್ತು ತೆಸ್ಪಿಯನ್ ಫಿಲ್ಮ್ಸ್ ಒಂದು ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಈ ಹೊಸ ಶೈಲಿಯ ಚಿತ್ರಕ್ಕಾಗಿ ನಿರ್ದೇಶಕ ಚಿದಂಬರಂ ಮತ್ತು ಜೀತು ಮಾಧವನ್ ಜೋಡಿಯ ಕೈಗಿತ್ತಿದ್ದಾರೆ. ತೆಸ್ಪಿಯನ್ ಫಿಲ್ಮ್ಸ್ ನ ಶ್ರೀಮತಿ ಶೈಲಜಾ ದೇಸಾಯಿ ಜೊತೆಗೆ ಕೆವಿಎನ್ ಪ್ರೊಡಕ್ಷನ್ಸ್ ನ ಈ ಕಾಂಬಿನೇಶನ್ ಬಗ್ಗೆ ಶ್ರೀ ವೆಂಕಟ್ ಕೆ ನಾರಾಯಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ನ ಸಂಸ್ಥಾಪಕ ವೆಂಕಟ ಕೆ ನಾರಾಯಣ ಅವರು ಮಾತನಾಡ್ತಾ, ನಾವು ನಮ್ಮ ಸಂಸ್ಥೆಯಿಂದ ಭಿನ್ನ ಬಗೆಯ, ಸದಭಿರುಚಿಯ ಮನರಂಜನಾತ್ಮಕ ಸಿನಿಮಾಗಳನ್ನ ಕೊಡೋ ದೃಷ್ಟಿಯಿಂದ ಕೆಲಸ ಮಾಡ್ತೇವೆ. ಅದ್ರಂತೆ ಇಂಥ ಹೊಸ ಬಗೆಯ ಚಿಂತನೆಯುಳ್ಳ, ನಿರ್ದೇಶಕರಿಂದ ಜನರನ್ನ ಮನರಂಜಿಸೊ ಕೆಲಸಕ್ಕೆ ಕೈ ಹಾಕಿರೋದೆ ಒಂದು ಒಳ್ಳೆಯ ಪ್ರಯತ್ನ. ಇಂತಹ ತಂಡದ ಜೊತೆಗೆ ಸಿನಿಮಾ ಮಾಡೋ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಡ್ತಿರೋದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ನಿರ್ದೇಶಕ ಚಿದಂಬರಂ ಮಾತನಾಡ್ತಾ,ಒಂದು ಕಥೆಯನ್ನ ತೆರೆಮೇಲೆ ತರೊ ಪ್ರಕ್ರಿಯೆನೇ ರೋಮಾಂಚಕ. ನನ್ನ ತರ ಒಳ್ಳೆ ಕಥೆಗೆ, ಸ್ಕ್ರಿಪ್ಟ್ ಗೆ ಒತ್ತು ಕೊಡೊ ತಂಡದ ಜೊತೆ ಕೆಲಸ ಮಾಡ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಈ ಹೊಸ ಚಿತ್ರದಲ್ಲಿ ನುರಿತ ತಂತ್ರಜ್ಞರು ಇರಲಿದ್ದಾರೆ. ಛಾಯಾಗ್ರಹಣಕ್ಕೆ ಶೈಜು ಖಾಲೆದ್, ಸಂಗೀತ ನೀಡಲು ಸುಶಿನ್ ಶ್ಯಾಮ್ ಆಯ್ಕೆಯಾದರೆ ಎಡಿಟಿಂಗ್ ಜವಾಬ್ದಾರಿ ವಹಿಸಲಿದ್ದಾರೆ ಎಂದರು.
ಈ ಚಿತ್ರಕ್ಕೆ ಕಥೆ ಬರೀತಿರೊ ಆವೇಶಮ್ ನಿರ್ದೇಶಕ ಜೀತು ಮಾಧವನ್ ಮಾತನಾಡ್ತಾ, ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆ, ಸಿನಿಮಾ ಕೃಷಿಯ ಬಗ್ಗೆ ಇಷ್ಟೊಂದು ಗಾಢ ಪ್ರೀತಿಯುಳ್ಳ ತಂಡದ ಜೊತೆ ಕೆಲಸ ಮಾಡೋದೆ ಒಂದು ದೊಡ್ಡ ಖುಷಿ ‘ ಅಂತ ಅಭಿಪ್ರಾಯಪಟ್ಟರು.