ಬಾಗಲಕೋಟೆ, ಜ.29 : ಮುಧೋಳ ತಾಲೂಕಿನ ಲೋಕಾಪುರ ಸಮೀಪದ ದಿ ವಿಲೇಜ್ ಹೋಟೆಲ್ ಬಳಿ ನಡು ರಸ್ತೆಯಲ್ಲಿ ಒಂದು ಅಕ್ಕಿ ಲಾರಿ ಹೊತ್ತಿ ಉರಿದ ಘಟನೆ ಸಂಭವಿಸಿದೆ.
ಗಂಗಾವತಿ ಬಳಿ ಸಾಗಿದ 30 ಟನ್ ಅಕ್ಕಿಯೊಂದಿಗೆ ಲಾರಿ ಕೊಲ್ಲಾಪುರಕ್ಕೆ ಹೊರಟಿದ್ದಾಗ, ರಾಜ್ಯ ಹೆದ್ದಾರಿ ಮಧ್ಯದಲ್ಲೇ ಲಾರಿ ಬೆಂಕಿಗಾಹುತಿಯಾಗಿದೆ. ಲಾರಿ ಟಯರ್ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ.ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.