ಮಂಗಳೂರು, ಮಾ .02 : ನಗರದ ನೀರೇಶ್ವಾಲ್ಯ, ಗೂಡ್’ಶೆಡ್ ರಸ್ತೆ ಯಲ್ಲಿರುವ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶಾಸಕರ ನಿಧಿಯಿಂದ ಅಭಿವೃದ್ಧಿಗೊಂಡ ಮೇಲ್ಛಾವಣಿ ಹಾಗೂ ಸರ್ವರ ಸಹಕಾರದಿಂದ ನಿರ್ಮಾಣಗೊಂಡ ಅನ್ನಪೂರ್ಣೇಶ್ವರಿ ಭೋಜನಾಲಯವನ್ನು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು.
ನಂತರ ಮಾತನಾಡಿದ ಶಾಸಕರು, ದೇವರ ಉತ್ಸವದ ಸಂದರ್ಭದಲ್ಲಿ ನಡೆಯುವ ಅನ್ನಸಂತರ್ಪಣಾ ಸೇವೆಯು ಭಕ್ತರಿಗೆ ಸಾಂಗವಾಗಿ ನಡೆಯುವ ಉದ್ದೇಶದೊಂದಿಗೆ ಇಲ್ಲಿ ಸುಸಜ್ಜಿತವಾದ ಭೋಜನಾಲಯ ಹಾಗೂ ಭಕ್ತರ ಹಿತದೃಷ್ಟಿಯಿಂದ ಮೇಲ್ಛಾವಣಿಯನ್ನು ನಿರ್ಮಿಸಲಾಗಿದ್ದು ಪವಿತ್ರ ಶಿವರಾತ್ರಿಯ ಸಂದರ್ಭದಲ್ಲೇ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹೆಚ್. ಅಶೋಕ್ ನಾಯಕ್, ಸಹ ಮೊಕ್ತೇಸರರಾದ ಶ್ರೀ ಎನ್. ಶಿವಪ್ರಸಾದ್ ನಾಯಕ್, ಶ್ರೀಮತಿ ಲಲಿತಾ ಮತ್ತು ಶ್ರೀ ಎಚ್. ಪ್ರಭಾಕರ ನಾಯಕ್ ಹೊನ್ನಕಟ್ಟೆ, ಸುಷ್ಮಾ ಮತ್ತು ಸುರೇಶ ಮಾಧವ ನಾಯಕ್ ಕೋಡಿಕಲ್, ಮತಿ ಸುಪ್ರಿಯ ಮತ್ತು ಪ್ರವೀಣಚಂದ್ರ ಸುಂದರ ನಾಯಕ್ ಮಣ್ಣಗುಡ್ಡೆ, ಚಾರೋಡಿ ಅಭ್ಯುದಯ ಸಂಘದ ಅಧ್ಯಕ್ಷರಾದಬಿ. ಮಧುಕರ ನಾಯಕ್ ಅಲ್ಲದೇ ಅನೇಕರು ಉಪಸ್ಥಿತರಿದ್ದರು.