ಬೆಂಗಳೂರು, ಮಾ.21 : ಟಿವಿ9 ಕನ್ನಡವು ಬೆಂಗಳೂರು ನಗರದ ಜನತೆಗೆ ಲೈಫ್ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋವನ್ನು ಆಯೋಜಿಸುತ್ತಿದೆ. ಈ ಎಕ್ಸ್ಪೋದಲ್ಲಿ ನೀವು ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ಗಳು, ಫ್ಯಾಷನ್, ಪೀಠೋಪಕರಣಗಳು ಮತ್ತು ಆಟೋಮೊಬೈಲ್ಗಳಲ್ಲಿನ ಇತ್ತೀಚಿನ ಟ್ರೆಂಡ್ ಗಳನ್ನು ಮಾರಾಟಕ್ಕಿಡಲಾಗಿದೆ.
ಎಕ್ಸ್ಪೋದಲ್ಲಿ ಅಂತರರಾಷ್ಟ್ರೀಯ ಪೀಠೋಪಕರಣಗಳು ಮತ್ತು ಸ್ಥಳೀಯ ಕುಶಲಕರ್ಮಿಗಳ ಹೊಸ ವಿನ್ಯಾಸಗಳು.ಗೃಹಾಲಂಕಾರ, ಉಪಕರಣಗಳು ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು.
ನಿಮ್ಮ ಮನಸ್ಸನ್ನು ಅರಳಿಸುವ ಕರಕುಶಲ ಉತ್ಪನ್ನಗಳು.ಆಟೋಮೊಬೈಲ್ ಕ್ಷೇತ್ರದಲ್ಲಿನ ನವೀನ ತಂತ್ರಜ್ಞಾನಗಳು ಲಭ್ಯವಿದೆ.
ಈ ಎಕ್ಸ್ಪೋ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮಾರ್ಚ್ 21 ರಿಂದ 23 ರವರೆಗೆ ನಡೆಯಲಿದೆ. ಸಮಯ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭೇಟಿ ನೀಡಬಹುದು.
ಎಕ್ಸ್ಪೋಗೆ ಪ್ರವೇಶ ಉಚಿತವಾಗಿದ್ದು, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬಂದು ಶಾಪಿಂಗ್ ಮಾಡಿ ಬೇಕಾಗುವ ವಸ್ತುಗಳನ್ನು ಖರೀದಿಸಬಹುದು.