ಮೆಕ್ಸಿಕೋ, ಜೂ. 27 : 3,000 ಕಾರುಗಳನ್ನು ಮೆಕ್ಸಿಕೋಗೆ ಸಾಗಿಸುತ್ತಿದ್ದ ಕಾರ್ಗೋ ಶಿಪ್ (ಸರಕು ಸಾಗಣೆ ಹಡಗು) ಉತ್ತರ ಪೆಸಿಫಿಕ್ ಸಾಗರದಲ್ಲಿ ಮುಳುಗಡೆಯಾಗಿದೆ.
ಮಾರ್ನಿಂಗ್ ಮಿಡಾಸ್ ಹೆಸರಿನ ಕಾರ್ಗೋ ಶಿಪ್ ನ್ನು ಹಡಗು ನಿರ್ವಹಣಾ ಕಂಪನಿ ಲಂಡನ್ನ ಜೋಡಿಯಾಕ್ ಮ್ಯಾರಿಟೈಮ್ ನಿರ್ವಹಣೆ ಮಾಡುತ್ತಿತ್ತು. ಸರಕು ಸಾಗಣೆ ಹಡಗು ಹೊಸ ಕಾರುಗಳನ್ನು ಅಲಾಸ್ಕಾದ ಅಡಕ್ ದ್ವೀಪದಿಂದ ಹೊತ್ತು ಮೆಕ್ಸಿಕೋದ ಬಂದರಿಗೆ ಭೂಪ್ರದೇಶದಿಂದ 300 ಮೈಲುಗಳು ದೂರದಲ್ಲಿ ಸಾಗುತ್ತಿತ್ತು.
ಜೂನ್ 3 ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಈ ಬಗ್ಗೆ ಹಡಗಿನಲ್ಲಿದ್ದ ಸಿಬ್ಬಂದಿ ಕೋಸ್ಟ್ ಗಾರ್ಡ್ಗೆ ಮಾಹಿತಿ ರವಾನಿಸಿದ್ದರು. ಪ್ರತಿಕೂಲ ಹವಾಮಾನ ಮತ್ತು ನೀರು ಸೋರಿಕೆಯಾದ ಕಾರಣ ಸಿಬ್ಬಂದಿಗೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಕಳೆದೊಂದು ವಾರದಿಂದ ಬೆಂಕಿಯಲ್ಲಿ ಉರಿಯುತ್ತಲೇ ಹಡಗು ದಡದತ್ತ ಸಾಗಿ ಬಂದಿದೆ. ಹೀಗಾಗಿ ಸರಕು ಸಾಗಣೆ ಹಡಗು ಸಮೇತ 800 ಎಲೆಕ್ಟ್ರಿಕ್ ವಾಹನಗಳೊಂದಿಗೆ ತುಂಬಿದ್ದ 3,000 ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ ಎಂದು ವರದಿಯಾಗಿದೆ.