ಮಂಗಳೂರು ,ಜು. 02: ಸುನಿ ಸಿನಿಮಾಸ್ ಅರ್ಪಿಸುವ ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದ ‘ಜಂಗಲ್ ಮಂಗಲ್’ ಸಿನಿಮಾ ಇದೇ ಜುಲೈ 4ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ರಕ್ಷಿತ್ ಕುಮಾರ್ ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಸಣ್ಣ ಹಳ್ಳಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಕಾಡಿನಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ನಡೆದಿದೆ. ಹೆಚ್ಚಾಗಿ ಕರಾವಳಿಯ ಕಲಾವಿದರನ್ನು ಸೇರಿಸಿ ನಿರ್ಮಿಸಲಾಗಿದೆ ಎಂದರು.
ಹಾಸ್ಯ ನಟ ಪುಷ್ಪರಾಜ್ ಬೊಳ್ಳಾರ್ ಮಾತನಾಡಿ, ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು.
ಚಿತ್ರದಲ್ಲಿ ನಾಯಕ ನಟನಾಗಿ ಯಶ್ ಶೆಟ್ಟಿ , ನಾಯಕಿಯಾಗಿ ಹರ್ಷಿತಾ, ಚಂದ್ರಹಾಸ್ ಉಳ್ಳಾಲ್, ಉಗ್ರಂ ಮಂಜು, ಹರ್ಷಿತಾ ರಾಮಚಂದ್ರ ಬಲ ರಾಜವಾಡಿ, ದೀಪಕ್ ರೈ ಪಾಣಾಜೆ, ಚಂದ್ರಹಾಸ್ ಉಳ್ಳಾಲ್ ಅಭಿನಯಿಸಿದ್ದಾರೆ. ಛಾಯಾಗ್ರಹಣ ವಿಷ್ಣುಪ್ರಸಾದ್, ಸಂಗೀತ ಪ್ರಸಾದ್ ಶೆಟ್ಟಿ, ಪೂರ್ಣಚಂದ್ರ ತೇಜಸ್ವಿ, ಸಂಕಲನ ಮನು ಶೇಡ್ಗರ್ ,ಕಲಾ ನಿರ್ದೇಶನ ವರದರಾಜ್ ಕಾಮತ್, ರಕ್ಷಿತ್ ಕುಮಾರ್ ನಿರ್ದೇಶನ ಮಾಡಿದ್ದಾರೆ.