ಮಂಗಳೂರು,ಆ. 13 : ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಮಂಗಳೂರು, ಇದರ ವತಿಯಿಂದ ಕದ್ರಿ ಹಿಲ್ಸ್ ನ ಶ್ರೀ ಗೋರಕ್ಷನಾಥ, ಜ್ಞಾನ ಮಂದಿರದಲ್ಲಿ ಆಟಿಡೊಂಜಿ ದಿನ ಹಾಗೂ ಸಂಘದ 2025ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಜರಗಿತು.

ಪ್ರೊ| ಸಂಜೀವ ಕುತ್ತಾಜೆ ಸುಳ್ಯ ಅವರು ಆಟ ಕೂಟದ ಸಂದೇಶ ನೀಡುತ್ತಾ, ಹಿಂದಿನ ಕಾಲದಲ್ಲಿ ಆಟಿ ದಿನಗಳು ಕಷ್ಟಕರವಾಗಿದ್ದವು. ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಆಚಾರ ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಆಟಿಡೊಂಜಿ ದಿನ ಆಚರಣೆ ಕಾರ್ಯಕ್ರಮವನ್ನು ಪ್ರತೀ ವರ್ಷ ಆಚರಿಸಿಕೊಂಡು ಬಂದಿದೆ ಎಂದು ಹೇಳಿದರು.
ಮಂಗಳೂರು ಜೋಗಿ ಸಮಾಜ ಸುಧಾರಕ ಸಂಘ ಇದರ 2025ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘವು ಪ್ರತೀವರ್ಷ ಆಟಿಡೊಂಜಿ ದಿನ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿರುವುದು ಪ್ರಶಂಸನೀಯ ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವೆಗೈದ ಹಿರಿಯರಾದ ಎ. ಮೋಹನ್ ಆಸನೆಬೈಲ್, ಮೋನಪ್ಪ ಪುರುಷ ಪುತ್ತೂರು, ಬಾರ್ಕೂರು ಗಣೇಶ ಬಳೆಗಾರ, ದಾಮೋದರ ಪುರುಷ ಬಾಯಾರು, ಗೋಪಾಲ ಜೋಗಿ ಕಾಪು ಮಜಲು ಹಾಗೂ ಪಿ.ಯಚ್.ಡಿ. ಪದವಿ ಪಡೆದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕರಾಟೆಯಲ್ಲಿ ವಿಶಿಷ್ಟ ಸಾಧನೆಗೈದ ಸಮೀಕ್ಷಾ ಅವರನ್ನು ಸಮಾನಿಸಲಾಯಿತು.

ಪಿಎಚ್.ಡಿ. ಪಡೆದ ಡಾ|| ಅರ್ಚನಾ ಯಶೋಧರ್, ಡಾ| ಜಯಪ್ರಕಾಶ್ ಜೋಗಿ ಕದ್ರಿ, ಎಸೆಸೆಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ,ಪಿಯುಸಿಯಲ್ಲಿ ಅತ್ಯುನ್ನತ ಸ್ಥಾನ ಗಳಿಸಿದ,ಎಸೆಸೆಲ್ಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ,ಪಿಯುಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶೇ. 75ಕ್ಕಿಂತ ಅಧಿಕ ಅಂಕಗಳಿಸಿದ ಎಸೆಸಲ್ಸಿ, ಪಿಯುಸಿ ಹಾಗೂ ಪದವಿಯ 42 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಆರ್ಥಿಕವಾಗಿ ಹಿಂದುಳಿದ 54 ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ| ಪಿ. ಕೇಶವನಾಥ್, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಬಿ, ಕೋಶಾಧಿಕಾರಿ ಎಲ್. ಯಶವಂತ್ ಕುಮಾರ್, ಯುವ ಘಟಕದ ಅಧ್ಯಕ್ಷ ಸನತ್ ಕದ್ರಿ, ಮಹಿಳಾ ಘಟಕದ ಅಧ್ಯಕ್ಷೆಸುನಂದ ಸುರೇಶ್, ಉಡುಪಿ -ಕಾರ್ಕಳ ಘಟಕ ಜೋಗಿ ಸಮಾಜ ಸಂಘದ ಅಧ್ಯಕ್ಷ ಗೋವಿಂದ ಜೋಗಿ ಪಳ್ಳಿ, ಜೋಗಿ ಸಮಾಜ ಸುಧಾರಕ ಸಂಘ ವಿಟ್ಲದ ಅಧ್ಯಕ್ಷ ರವಿ ಕುಮಾರ್ ಆರ್.ಎಸ್, ಜೋಗಿ ಸಂಘ ಮುಡಿಪು ವಲಯದ ಅಧ್ಯಕ್ಷ ಸಂಜೀವ ಮುಡಿಪು, ಜೋಗಿ ಸಮಾಜ ಸುಧಾರಕ ಸಂಘ ಕಾಸರಗೋಡಿನ ಅಧ್ಯಕ್ಷ ಗೋಪಾಲ ಮಂಜೇಶ್ವರ, ಉತ್ತರ ಕನ್ನಡ ಜಿಲ್ಲಾನಾಥ ಪಂಥ ಜೋಗಿ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಶಿವರಾಮ್ ಬಳೆಗಾರ್, ಅಲೆಮಾರಿ ಮತ್ತು ಅರೆ ಅಲೆಮಾರಿ ಒಕ್ಕೂಟ ಉಡುಪಿಯ ಅಧ್ಯಕ್ಷ ಕೃಷ್ಣಯ್ಯ ಜೋಗಿ ಅಂಕದಕಟ್ಟೆ ಉಪಸ್ಥಿತರಿದ್ದರು.
ಕರ್ನಾಟಕ ಜೋಗಿ ಸಮಾಜದ ಮಹಿಳಾ ಸದಸ್ಯರು, ಮಕ್ಕಳಿಂದ ಆಟಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಗೀತ ಕಾರ್ಯಕ್ರಮ, ನೃತ್ಯ ಪ್ರದರ್ಶನ ನಡೆಯಿತು. ಕಲಾಕುಂಭ ಕುಳಾಯಿ ಇವರ ತಂಡ ಪ್ರದರ್ಶಿಸಿದ ‘ಪರಮಾತ್ಮ ಪಂಜುರ್ಲಿ’ ನಾಟಕ ಪ್ರದರ್ಶನ ನಡೆಯಿತು.ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಿ. ವಂದಿಸಿದರು. ವರದರಾಜ್ ಕಾರ್ಯಕ್ರಮ ನಿರೂಪಿಸಿದರು.











